‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್ಗೆ ಎಚ್ಚರಿಕೆ
‘ಮೆಜೆಸ್ಟಿಕ್’ ಸಿನಿಮಾ ದರ್ಶನ್ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ. ಈ ಸಿನಿಮಾದ ನಿರ್ಮಾಪಕ ರಾಮಮೂರ್ತಿಯವರ ಬಗ್ಗೆ ದರ್ಶನ್ಗೆ ವಿಶೇಷ ಗೌರವ. ಆದರೆ ಆ ಸಿನಿಮಾದ ಏಕೈಕ ನಿರ್ಮಾಪಕ ನಾನು ಎಂದಿರುವ ಭಾಮಾ ಹರೀಶ್, ‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ದರ್ಶನ್ ತಿಳಿದು ಮಾತನಾಡಬೇಕು ಎಂದಿದ್ದಾರೆ.
‘ಮೆಜೆಸ್ಟಿಕ್’ ಸಿನಿಮಾ ಬಿಡುಗಡೆ ಆಗಿ 22 ವರ್ಷಗಳಾಗಿವೆ. ಸಿನಿಮಾ ಬಿಡುಗಡೆ ಆಗಿ ಎರಡು ದಶಕ ಪೂರೈಸಿದಾಗ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ (Darshan Thoogudeepa) ಮಾತನಾಡಿ, ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ ರಾಮಮೂರ್ತಿಯವರನ್ನು ಕೊಂಡಾಡಿದ್ದರು. ನನಗೆ ಪ್ರಶ್ನೆ ಮಾಡುವ ಹಕ್ಕು ಇರುವ ಒಬ್ಬರೇ ನಿರ್ಮಾಪಕ ರಾಮಮೂರ್ತಿ ಎಂದಿದ್ದರು. ಆದರೆ ಟಿವಿ9 ಜೊತೆ ಮಾತನಾಡಿರುವ ಹಿರಿಯ ನಿರ್ಮಾಪಕ ಭಾಮಾ ಹರೀಶ್, ‘ಮೆಜೆಸ್ಟಿಕ್’ ಸಿನಿಮಾದ ಏಕೈಕ ನಿರ್ಮಾಪಕ ತಾವೇ ಎಂದಿದ್ದಾರೆ. ಆ ಸಿನಿಮಾವನ್ನು ನನ್ನ ಮಗ ಉಲ್ಲಾಸ್ ಹೆಸರಿನಲ್ಲಿ ಪ್ರಾರಂಭಿಸಿದ್ದ ಉಲ್ಲಾಸ್ ಪ್ರೊಡಕ್ಷನ್ ಹೌಸ್ ಹೆಸರಲ್ಲಿ ನಿರ್ಮಿಸಿದ್ದು. ಆ ಸಿನಿಮಾದ ಸಂಪೂರ್ಣ ಸೈನಿಂಗ್ ಅಥಾರಿಟಿ ನನ್ನದ್ದೇ ಆಗಿತ್ತು ಎಂದಿದ್ದಾರೆ. ದರ್ಶನ್ ಎಲ್ಲೂ ಸಹ ತಮ್ಮ ಹೆಸರು ಉಲ್ಲೇಖ ಮಾಡದೇ ಇರುವ ಬಗ್ಗೆಯೂ ಮಾತನಾಡಿದ ಹರೀಶ್, ದರ್ಶನ್ ‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ತಿಳಿದುಕೊಂಡು, ಎಚ್ಚರಿಕೆಯಿಂದ ಮಾತನಾಡಬೇಕು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ