ಡೆತ್ ನೋಟ್ 2 ದಿನ ಮೊದಲೇ ಸಿಕ್ಕರೂ ಮಹಿಳಾ ಸಹೋದ್ಯೋಗಿ ಮತ್ತು ಪತ್ನಿ; ಬಾಬುವನ್ನು ಯಾಕೆ ತಡೆದಿಲ್ಲ?
ಸಂಸದನ ಬೆಂಬಲಿಗನಾಗಿರುವ ನಾಗೇಶ್ ಜಿಲ್ಲಾ ಪಂಚಾಯತಿ ಕಚೇರಿಯಲ್ಲೇ ಕೆಲಸ ಮಾಡೋದು ಅಂತ ಗೊತ್ತಾಗಿದೆ. ಸರ್ಕಾರೀ ಕೆಲಸ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಲಾಗಿದೆ ಎಂದ ಬಾಬು ಡೆತ್ನೋಟ್ನಲ್ಲಿ ಉಲ್ಲೇಖಿಸಿರುವುದರ ಜೊತೆ ಸ್ಥಳೀಯ ಸಂಸದ ಡಾ ಸುಧಾಕರ್ ಹೆಸರು ಕೂಡ ಪ್ರಸ್ತಾಪಿಸಿರುವುದರಿಂದ ಪೊಲೀಸ್ ತನಿಖೆ ನಂತರವೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ.
ಚಿಕ್ಕಬಳ್ಳಾಪುರ, ಆಗಸ್ಟ್ 7: ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿಯವರ (chief accounts officer) ಕಾರು ಚಾಲಕನಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಾಬು ಹೆಸರಿನ ವ್ಯಕ್ತಿ ಜಿಪಂ ಕಚೇರಿ ಆವರಣದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೇನೆಂದರೆ ಸಾಯುವ ಎರಡು ದಿನ ಮುಂಚೆಯೇ ಬಾಬು ಡೆತ್ ನೋಟೊಂದನ್ನು ಇದೇ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಯೊಬ್ಬರಿಗೆ ಕಳಿಸಿದ್ದಾರೆ. ಈ ಉದ್ಯೋಗಿಯು ಅದನ್ನು ಬಾಬು ಪತ್ನಿಗೆ ಕಳಿಸಿದ್ದಾರಂತೆ. ಆದಾಗ್ಯೂ, ಬಾಬು ಇಂಥ ಕೃತ್ಯಕ್ಕೆ ಮುಂದಾಗುವುದನ್ನು ತಡೆಯಲು ಯಾಕೆ ಯಾರೂ ಪ್ರಯತ್ನಿಸಿಲ್ಲ ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ನಾಲ್ಕು ಪುಟಗಳ ಡೆತ್ ನೋಟಲ್ಲಿ ಅವರು ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್, ಮತ್ತು ಅವರ ಬೆಂಬಲಿಗರಾದ ನಾಗೇಶ್, ಮಂಜುನಾಥ್ ಹೆಸರು ಬರೆದಿದ್ದರಂತೆ. ರೂ. 40 ಲಕ್ಷ ನೀಡಿದರೆ ಸರ್ಕಾರೀ ಕೆಲಸ ಕೊಡಿಸುತ್ತೇವೆ ಅಂತ ಹೇಳಿ ₹20 ಲಕ್ಷ ಪಡೆದು ಕೆಲಸ ಕೊಡಿಸದೆ ತನ್ನನ್ನು ಸತಾಯಿಲಾಗಿದೆ ಎಂದು ಬಾಬು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ ಚೌಕ್ಸೆ ಅವರು ಬಾಬು ಪತ್ನಿಯ ಜತೆ ಮಾತಾಡುವ ಪ್ರಯತ್ನ ಮಾಡಿದೆ, ಅದರೆ ಅವರು ಮಾತಾಡುವ ಸ್ಥಿತಿಯಲ್ಲಿಲ್ಲ ಎಂದರು.
ಇದನ್ನೂ ಓದಿ: ತನ್ನಾಸೆಯನ್ನು ಈಡೇರಿಸಲು ನಿರಾಕರಿಸುತ್ತಿದ್ದ ಹೆಂಡತಿಯನ್ನು ಸಾಯಿಸಿದ ಗಂಡ ತಾನೂ ನೇಣು ಬಿಗಿದುಕೊಂಡು ಸತ್ತ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
