ತನ್ನಾಸೆಯನ್ನು ಈಡೇರಿಸಲು ನಿರಾಕರಿಸುತ್ತಿದ್ದ ಹೆಂಡತಿಯನ್ನು ಸಾಯಿಸಿದ ಗಂಡ ತಾನೂ ನೇಣು ಬಿಗಿದುಕೊಂಡು ಸತ್ತ!
ಸುರೇಶ್ ಮತ್ತು ಮಮತಾ 10 ವರ್ಷ ಮತ್ತು 6 ವರ್ಷದ ಗಂಡು ಮಕ್ಕಳಿದ್ದಾರೆ. ಚಿಕ್ಕ ಮಗನ ಎದುರೇ ಘಟನೆ ನಡೆದಿದ್ದು ಅವನು ಅಳುತ್ತ ಹೊರಗೋಡಿ ಬಂದು ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾನೆ. ಸುರೇಶನ ಅವಿವೇಕತನಕ್ಕೆ ಈಗ ಎರಡೂ ಮಕ್ಕಳು ಅನಾಥ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರು, ಫೆ 26: ಮಾಧ್ಯಮಗಳ ಜೊತೆ ಮಾತಾಡುತ್ತಿರುವ ಮಹಿಳೆಯ ಹೆಸರು ರುಕ್ಮಿಣಿ. ಇವರ ಮಗಳನ್ನು ಕಾಮಪಿಪಾಸು ಅಳಿಯನೇ ಕೊಂದು ತಾನು ನೇಣಿಗೆ ಶರಣಾಗಿದ್ದಾನೆ. ನಗರದ ಬ್ಯಾಡರಹಳ್ಳಿಯಲ್ಲಿರುವ ಕಾಳಿಕಾನಗರದಲ್ಲಿ ವಾಸವಾಗಿದ್ದ ಅಳಿಯನ ಹೆಸರು ಸುರೇಶ್ ಮತ್ತು ಮದುವೆಯಾದ13 ವರ್ಷಗಳಿಂದ ಗಂಡ ನೀಡುತ್ತಿದ್ದ ಲೈಂಗಿಕ ಹಿಂಸೆಯಿಂದ ಖುದ್ದು ತಾನೇ ಅತ್ಮಹತ್ಯೆ ಮಾಡಿಕೊಳ್ಳುವಷ್ಟು ಬೇಸತ್ತಿದ್ದ ಮಗಳ ಹೆಸರು ಮಮತಾ. ಸುರೇಶ್ ಮೊಬೈಲ್ನಲ್ಲಿ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದನ್ನು ಅನುಸರಿಸುವಂತೆ ಎಡೆಬಿಡದೆ ಪೀಡಿಸುತ್ತಿದ್ದನಂತೆ. ಇದೇ ಕಾರಣಕ್ಕೆ ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ಡಿವೋರ್ಸ್ ಹಂತ ತಲುಪಿತ್ತು. ನಿನ್ನೆ ರಾತ್ರಿಯೂ ಜಗಳ ನಡೆದಿದ್ದು ಅದು ವಿಕೋಪಕ್ಕೆ ಹೋಗಿ ಸುರೇಶ್ ತನ್ನ ಮಗನ ಎದುರೇ ಹೆಂಡತಿಯನ್ನು ಕತ್ತು ಹಿಸುಕಿ ಸಾಯಿಸಿ ತಾನು ಸೀರೆಯೊಂದರಿಂದ ನೇಣು ಬಿಗಿದುಕೊಂಡನಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿಕ್ಷಕಿಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವಿದ್ಯಾರ್ಥಿಗಳ ಸೆರೆ