ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ! ಹಿಂದೂ ಮಹಿಳೆಯಿಂದ ತರಾಟೆ

Updated on: May 20, 2026 | 1:30 PM

ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ ಪಟ್ಟಣದ ಪ್ರಸಿದ್ಧ ದೇಗುಲವೊಂದರಲ್ಲಿ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ ಧರಿಸಿ ಕುಳಿತಿದ್ದಕ್ಕೆ ಹಿಂದೂ ಪ್ರವಾಸಿ ಮಹಿಳೆಯೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರೋಷನಿ ಮುಸ್ತಾಫಿ ಎಂಬ ಯುವತಿ ದೇಗುಲದ ಆವರಣದಲ್ಲಿ ಚಪ್ಪಲಿ ಧರಿಸಿ ಕೂತಿದ್ದಾಗ, ಹಿಂದೂ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ದರ್ಗಾಕ್ಕೆ ಚಪ್ಪಲಿ ಹಾಕಿಕೊಂಡು ಹೋಗುತ್ತೇವಾ? ಎಷ್ಟು ಹೇಳಿದ್ರೂ ಕೇಳಲ್ಲ, ಕೇಳಿದ್ರೆ 'ಸ್ಟಾಪ್' ಅಂತೀಯಾ ಎಂದು ತರಾಟೆಗೆ ಪಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ತದನಂತರ, ಮುಸ್ಲಿಂ ಯುವತಿಯು ಪತ್ರದ ಮೂಲಕ ತನ್ನ ತಪ್ಪೊಪ್ಪಿಗೆ ಬರೆದುಕೊಟ್ಟ ಬಳಿಕ ಹಿಂದೂ ಮಹಿಳೆ ಶಾಂತರಾಗಿದ್ದು, ವಿವಾದ ತಿಳಿಯಾಗಿದೆ.

ಬಾಗಲಕೋಟೆ, ಮೇ 20: ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ ಪಟ್ಟಣದ ಪ್ರಸಿದ್ಧ ದೇಗುಲವೊಂದರಲ್ಲಿ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ ಧರಿಸಿ ಕುಳಿತಿದ್ದಕ್ಕೆ ಹಿಂದೂ ಪ್ರವಾಸಿ ಮಹಿಳೆಯೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರೋಷನಿ ಮುಸ್ತಾಫಿ ಎಂಬ ಯುವತಿ ದೇಗುಲದ ಆವರಣದಲ್ಲಿ ಚಪ್ಪಲಿ ಧರಿಸಿ ಕೂತಿದ್ದಾಗ, ಹಿಂದೂ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ದರ್ಗಾಕ್ಕೆ ಚಪ್ಪಲಿ ಹಾಕಿಕೊಂಡು ಹೋಗುತ್ತೇವಾ? ಎಷ್ಟು ಹೇಳಿದ್ರೂ ಕೇಳಲ್ಲ, ಕೇಳಿದ್ರೆ ‘ಸ್ಟಾಪ್’ ಅಂತೀಯಾ ಎಂದು ತರಾಟೆಗೆ ಪಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ತದನಂತರ, ಮುಸ್ಲಿಂ ಯುವತಿಯು ಪತ್ರದ ಮೂಲಕ ತನ್ನ ತಪ್ಪೊಪ್ಪಿಗೆ ಬರೆದುಕೊಟ್ಟ ಬಳಿಕ ಹಿಂದೂ ಮಹಿಳೆ ಶಾಂತರಾಗಿದ್ದು, ವಿವಾದ ತಿಳಿಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More