Assembly Polls: ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ದೆಹಲಿಗೆ ಹೋಗಲಿದ್ದಾರೆ ಅಲ್ಲಿಯ ಮತದಾರರು!
ಅಭ್ಯರ್ಥಿ ಮತದಾರನ ಮನೆಗೆ ಹೋಗಿ ವೋಟು ಕೇಳುವುದು ವಾಡಿಕೆ, ಅದರೆ ಬಾದಾಮಿಯ ಮತದಾರರೇ ಸಿದ್ದರಾಮಯ್ಯನವರಲ್ಲಿಗೆ ಹೋಗಿ ನಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬಾಗಲಕೋಟೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು (Siddaramaiah) ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅನೇಕ ಬಾರಿ ಹೇಳಿದ್ದಾರೆ. ಆದರೆ ಬಾದಾಮಿ ಮತದಾರರಿಗೆ (Badami voters) ವಿರೋಧ ಪಕ್ಷದ ನಾಯಕ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದು ಸುತಾರಾಂ ಇಷ್ಟವಿಲ್ಲ. ಸಿದ್ದರಾಮಯ್ಯನವರಿಂದ ಇನ್ನೂ ಸ್ಪಷ್ಟ ಉತ್ತರ ಸಿಗದ ಕಾರಣ ಕ್ಷೇತ್ರದ ಸುಮಾರು 1,000 ಸಾವಿರ ಜನ ದೆಹಲಿಗೆ ಹೋಗಿ ಹೈಕಮಾಂಟ್ (high command) ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಚುನಾವಣೆ ಸಮಯದಲ್ಲಿ ಅಭ್ಯರ್ಥಿ ಮತದಾರನ ಮನೆಗೆ ಹೋಗಿ ವೋಟು ಕೇಳುವುದು ವಾಡಿಕೆ, ಅದರೆ ಬಾದಾಮಿಯ ಮತದಾರರೇ ಸಿದ್ದರಾಮಯ್ಯನವರಲ್ಲಿಗೆ ಹೋಗಿ ನಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮತದಾರರೊಬ್ಬರು ಹೇಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos