Hubballi: ನೆಚ್ಚಿನ ನಾಯಕನ ಶಾಸಕನಾಗಲಿ ಅಂತ ಅಭಿಮಾನಿಯೊಬ್ಬರು ಮಂಡಿಗಳಿಂದ ಬೆಟ್ಟಹತ್ತಿ ಪ್ರಾರ್ಥನೆ ಸಲ್ಲಿಸಿದರು!

Arun Kumar Belly

| Edited By: TV9 SEO

Updated on:Feb 24, 2023 | 11:52 AM

ತನ್ನ ನಾಯಕನಿಗೆ ಟಿಕೆಟ್ ಸಿಗಲಿ, ಅವರು ಶಾಸಕರಾಗಲಿ ಅಂತ ಹರಕೆ ಹೊತ್ತು ಹುಬ್ಬಳ್ಳಿ ನಗರದಲ್ಲಿರುವ ತಿರುಪತಿ ಬೆಟ್ಟದ 51 ಮೆಟ್ಟಿಲುಗಳನ್ನು ಮಂಡಿಗಳ ಮೂಲಕ ಹತ್ತಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿರುವ ದೀಪಕ್ ಚಿಂಚೋರೆ (Deepak Chinchore) ಟಿಕೆಟ್ ಆಕಾಂಕ್ಷಿಯೂ ಅಗಿದ್ದಾರೆ. ಅವರ ಅಭಿಮಾನಿಯಾಗಿರುವ ಶಿವಕುಮಾರ ಗೋಕಾವಿ (Shivakumar Gokavi) ಹೆಸರಿನ ಯುವಕರೊಬ್ಬರು ತನ್ನ ನಾಯಕನಿಗೆ ಟಿಕೆಟ್ ಸಿಗಲಿ, ಅವರು ಶಾಸಕರಾಗಲಿ ಅಂತ ಹರಕೆ ಹೊತ್ತು ಹುಬ್ಬಳ್ಳಿ ನಗರದಲ್ಲಿರುವ ತಿರುಪತಿ ಬೆಟ್ಟದ (Tirupati Betta) 51 ಮೆಟ್ಟಿಲುಗಳನ್ನು ಮಂಡಿಗಳ ಮೂಲಕ ಹತ್ತಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರು ಶಾಸಕರಾದರೆ ಕ್ಷೇತ್ರ ಮತ್ತು ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಶಿವಕುಮಾರ್ ಅಭಿಮಾನದಿಂದ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada