6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ಬಾಗಲಕೋಟೆಯ ನವನಗರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆರು ವಿಷಯಗಳಲ್ಲಿಯೂ ಫೇಲ್ ಆದ ಅಭಿಷೇಕ್ ಯಲ್ಲಪ್ಪ ಚೊಳಚಗುಡ್ಡ ಎಂಬ ವಿದ್ಯಾರ್ಥಿಗೆ ಅವನ ಕುಟುಂಬ ಕೇಕ್ ತಿನ್ನಿಸಿ ಧೈರ್ಯ ತುಂಬಿದೆ. ಪೋಷಕರು, ಸಹೋದರ, ಸಹೋದರಿ ಮತ್ತು ಅಜ್ಜಿ ಸೇರಿದಂತೆ ಇಡೀ ಕುಟುಂಬ ಈ ಸಂದರ್ಭದಲ್ಲಿ ಒಟ್ಟಾಗಿ ನಿಂತು ಅಭಿಷೇಕ್‌ಗೆ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಪ್ರೋತ್ಸಾಹ ನೀಡಿದೆ. ಈ ಘಟನೆ ಕುಟುಂಬದ ಪ್ರೀತಿ ಮತ್ತು ಬೆಂಬಲದ ಶಕ್ತಿಯನ್ನು ತೋರಿಸುತ್ತದೆ.
ಬಾಗಲಕೋಟೆ, ಮೇ 02: ಎಸ್ಎಸ್ಎಲ್ಸಿ 6 ವಿಷಯದಲ್ಲೂ ಫೇಲ್ ಆದ ಮಗನಿಗೆ ಪೋಷಕರು ಕೇಕ್ ತಿನ್ನಿಸಿ ಧೈರ್ಯ ಹೇಳಿದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಫೇಲ್ ಆದ ಮನೆ ಮಗನಿಗೆ ತಂದೆ, ತಾಯಿ, ಸಹೋದರ, ಸಹೋದರಿ ಅಜ್ಜಿ ಹಾಗೂ ಕುಟುಂಬದ ಇತರ ಸದಸ್ಯರು ಕೇಕ್ ತಿನ್ನಿಸಿ ಧೈರ್ಯ ಹೇಳಿದ್ದಾರೆ. ಅಭಿಷೇಕ ಯಲ್ಲಪ್ಪ ಚೊಳಚಗುಡ್ಡ ಎಂಬುವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 200 ಅಂಕ (ಶೇ 32 ರಷ್ಟು) ಅಂಕ ಪಡೆದು ಆರಕ್ಕೆ ಆರೂ ವಿಷಯದಲ್ಲಿ ಪೇಲ್ ಆಗಿದ್ದಾರೆ.
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

