ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಸಾವು: ಅಸಲಿಗೆ ಆಗಿದ್ದೇನು? ಸಂಬಂಧಿಕರು ಹೇಳಿದ್ದೇನು? ನೋಡಿ
ತಾಳಿ ಕಟ್ಟಿದ ಕೆಲವೇ ಕ್ಷಣಗಳ ನಂತರ, ಹೊಸ ಜೀವನಕ್ಕೆ ಕಾಲಿಟ್ಟಿದ್ದ ವರ ಪ್ರವೀಣ ಹೃದಯಾಘಾತದಿಂದ ನಿಧನರಾದರು. ಸಂಭ್ರಮದ ಕಲ್ಯಾಣ ಮಂಟಪ ದುಃಖದ ಸ್ಥಳವಾಗಿ ಮಾರ್ಪಟ್ಟಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ದುರಂತ ಘಟನೆಯು ಕುಟುಂಬಸ್ಥರಿಗೆ ಆಘಾತವನ್ನುಂಟುಮಾಡಿದೆ. ಹೊಸ ಜೀವನ ಕಾಲಿಟ್ಟಿದ್ದ ವರ ಮೃತಪಟ್ಟಿದ್ದು ಮಾತ್ರ ದುರದೃಷ್ಟಕರ.
ಬಾಗಲಕೋಟೆ, ಮೇ 17: ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಸೂತಕದ ಛಾಯೆ ಆವರಿಸಿದೆ. ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಪ್ರವೀಣ ಮೃತ ಮದುಮಗ. ಹೊಸ ಬಾಳಿಗೆ ಕಾಲಿಟ್ಟಿದ್ದ ಯುವಕ ಮಸಣ ಸೇರಿದ್ದು ಮಾತ್ರ ದುರದೃಷ್ಟಕರ ಸಂಗತಿಯಾಗಿದೆ. ಇನ್ನು, ಸಂಭ್ರಮದಿಂದ ಇರಬೇಕಾದ ಕಲ್ಯಾಣಮಂಟಪ ಬಿಕೊ ಎನ್ನುತ್ತಿದೆ. ಜನರಿಗೆ ಮಾಡಿಸಿದ ಅಡುಗೆ ಮತ್ತು ಊಟ ಬಡಿಸಲು ತಂದಿದ್ದ ಪಾತ್ರೆ ಎಲ್ಲವನ್ನು ಸ್ಥಳಾಂತರಿಸಲಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Published on: May 17, 2025 03:50 PM
