ಸಾಧನೆಗೆ ಅಡ್ಡಿಯಾಗಲಿಲ್ಲ ಬಡತನ; ಕಡು ಬಡತನ ಮೆಟ್ಟಿನಿಂತು PSI ಆದ ಬಸವಣ್ಣನ ನಾಡಿನ ಯುವತಿ ರೇಣುಕಾ ವಡ್ಡರ್
ಬಾಗಲಕೋಟೆಯ ನವನಗರದ ನಿವಾಸಿ ಈ ರೇಣುಕಾ ವಡ್ಡರ್.. ರೇಣುಕಾ ವಡ್ಡರ್ ಕೇವಲ 4 ವರ್ಷದವಳಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಸಂಸಾರ ನಿರ್ವಹಣೆ ಮಾಡೋದಕ್ಕೆ ರೇಣುಕಾ ತಾಯಿ ಕಲ್ಲವ್ವ ಹತ್ತಾರು ಮನೆಗಳಲ್ಲಿ ಪಾತ್ರೆ ತೊಳೆದು ಮಕ್ಕಳ ಆರೈಕೆ ಮಾಡಿದ್ದಳು.
ಸಾಧನೆಗೆ ಬಡತನ ಅಡ್ಡಿಯಲ್ಲ ಅನ್ನೋ ಮಾತನ್ನ ಬಸವಣ್ಣನ ನಾಡಿನ ಯುವತಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಟ್ಟ ಕಡುಬಡತನದಲ್ಲೂ ಛಲಬಿಡದೆ ಓದಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೇರಿದ್ದಾರೆ. ಸಾಧನೆ ಸ್ಟೋರಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಬಾಗಲಕೋಟೆಯ ನವನಗರದ ನಿವಾಸಿ ಈ ರೇಣುಕಾ ವಡ್ಡರ್.. ರೇಣುಕಾ ವಡ್ಡರ್ ಕೇವಲ 4 ವರ್ಷದವಳಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಸಂಸಾರ ನಿರ್ವಹಣೆ ಮಾಡೋದಕ್ಕೆ ರೇಣುಕಾ ತಾಯಿ ಕಲ್ಲವ್ವ ಹತ್ತಾರು ಮನೆಗಳಲ್ಲಿ ಪಾತ್ರೆ ತೊಳೆದು ಮಕ್ಕಳ ಆರೈಕೆ ಮಾಡಿದ್ದಳು. ಸಹೋದರರು ಕಟ್ಟಡ ಕಟ್ಟುವ ಕೂಲಿ ಕೆಲಸ ಮಾಡಿ ಸಹೋದರಿಗೆ ಆಸರೆಯಾಗಿದ್ದರು. ಇಂತಹ ಕಡುಬಡತನದಲ್ಲಿ ಬೆಳೆದ ರೇಣುಕಾ ಕಷ್ಟಪಟ್ಟು ಓದಿ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ.
ರೇಣುಕಾ ತಂದೆ ತಾಯಿಗೆ ಒಟ್ಟು ಐದು ಜನ ಮಕ್ಕಳು. ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು. ಅದರಲ್ಲಿ ಕೊನೆಯವರೇ ರೇಣುಕಾ ವಡ್ಡರ್. ರೇಣುಕಾ ವಡ್ಡರ್ 2013 ರಲ್ಲಿ ಡಿಎಡ್ ಮುಗಿಸಿದ್ದು, 2016ರಲ್ಲಿ ಬಿಎ ಪದವಿ ಮುಗಿಸಿದ್ದಾರೆ. ಇನ್ನು ರೇಣುಕಾ ಅವರ ಸಾಧನೆಗೆ ಸ್ಥಳೀಯರು ಮನೆಗೆ ಬಂದು ಸನ್ಮಾನ ಮಾಡಿ ಗೌರವಿಸಿದ್ದಾರೆ. ಅದೆಷ್ಟೋ ಯುವಕರು ಬಡತನವನ್ನು ಸಾಧನೆಗೆ ಅಡ್ಡಿ ಎಂದು ನೆಪವಾಗಿಸಿಕೊಳ್ತಾರೆ. ಆದ್ರೆ ರೇಣುಕಾ ಅಂತಹವರು ಅಂತಹ ಪರಿಸ್ಥಿತಿಗಳನ್ನ ಮೀರಿ ಸಾಧಿಸಿ ತೋರಿಸ್ತಾರೆ. ಅದೇಷ್ಟೋ ಯುವಕರಿಗೆ ರೇಣುಕಾ ಮಾದರಿಯಾಗಿದ್ದಾರೆ.