AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ: ಗೋಲ್ಡ್​​ ಮೆಡಲ್​​ ಪಡೆದ ರೈತ ಕುಟುಂಬದ ವಿದ್ಯಾರ್ಥಿನಿ

ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ: ಗೋಲ್ಡ್​​ ಮೆಡಲ್​​ ಪಡೆದ ರೈತ ಕುಟುಂಬದ ವಿದ್ಯಾರ್ಥಿನಿ

ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Apr 24, 2026 | 5:52 PM

Share

ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಉಪಸ್ಥಿತಿಯಲ್ಲಿ ರೈತ ಕುಟುಂಬದ ಸನ್ಮತಿ ಜಿನಪ್ಪ ಕುಪ್ಪಿ (ಎಂಎಸ್ಸಿ ಭೌತಶಾಸ್ತ್ರ) ಮತ್ತು ಪ್ರಿಯಾಂಕ ಅಟ್ಪತ್ (ಎಂಎ ಇತಿಹಾಸ) ಚಿನ್ನದ ಪದಕ ಗಳಿಸಿ ಸಂಭ್ರಮಿಸಿದ್ದಾರೆ. ಕೆಸೆಟ್ ಉತ್ತೀರ್ಣರಾಗಿರುವ ಇವರು ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ಕನಸು ಕಾಣುತ್ತಿದ್ದಾರೆ. ತಮ್ಮ ಪೋಷಕರ ಪ್ರೋತ್ಸಾಹವೇ ಯಶಸ್ಸಿಗೆ ಕಾರಣ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ, ಏಪ್ರಿಲ್​​ 24: ಇಲ್ಲಿನ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರು ಚಿನ್ನದ ಪದಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಈ ಐತಿಹಾಸಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದ್ದು, ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರು ಭಾಗವಹಿಸಿದ್ದರು. ಎಂಎಸ್ಸಿ ಭೌತಶಾಸ್ತ್ರದಲ್ಲಿ 8.9 ಸಿಜಿಪಿಎ ಗಳಿಸಿರುವ ಸನ್ಮತಿ ಜಿನಪ್ಪ ಕುಪ್ಪಿ ಅವರು ಬಸವೇಶ್ವರ ಬಾಗಲಕೋಟ್ ಕಾಲೇಜಿನಿಂದ ವಿಶ್ವವಿದ್ಯಾಲಯದ ಮೊದಲ ಭೌತಶಾಸ್ತ್ರ ಗೋಲ್ಡ್​​ ಮೆಡಲ್​ ವಿಜೇತರಾಗಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಸನ್ಮತಿ, ತಮ್ಮ ಈ ಸಾಧನೆಯು ತಮ್ಮ ಹಲವು ವರ್ಷಗಳ ಕಷ್ಟದ ಫಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸನ್ಮತಿ ಪ್ರಸ್ತುತ ಬಿಎಲ್ಡಿ ಕಾಲೇಜಿನಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪಿಎಚ್‌ಡಿ ಮತ್ತು ಸಂಶೋಧನಾ ಕ್ಷೇತ್ರವನ್ನು ಪ್ರವೇಶಿಸುವ ಆಕಾಂಕ್ಷೆ ಹೊಂದಿದ್ದಾರೆ. ಕಳೆದ ವರ್ಷ ಕೆಸೆಟ್ ಪರೀಕ್ಷೆಯನ್ನು ಕೂಡ ಅವರು ಉತ್ತೀರ್ಣರಾಗಿದ್ದಾರೆ. ಇದೇ ರೀತಿ, ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಗಳಿಸಿದ ಪ್ರಿಯಾಂಕ ಅಟ್ಪತ್ ಕೂಡ ತಮ್ಮ ಸಾಧನೆಯ ಬಗ್ಗೆ ಅಪಾರ ಸಂತಸಗೊಂಡಿದ್ದಾರೆ. ಇತ್ತೀಚೆಗೆ ಕೆಸೆಟ್ ಪರೀಕ್ಷೆಯನ್ನು ಉತ್ತೀರ್ಣರಾಗಿರುವ ಪ್ರಿಯಾಂಕ, ಸಹಾಯಕ ಪ್ರಾಧ್ಯಾಪಕರಾಗುವ ಗುರಿ ಹೊಂದಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರೂ ತಮ್ಮ ಪೋಷಕರ ಸಂಪೂರ್ಣ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಅವರ ಪ್ರೋತ್ಸಾಹವೇ ಈ ಯಶಸ್ಸಿಗೆ ಕಾರಣ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Follow Us