Video: ಹೇಗಿದೆ ನೋಡಿ ಜೋಡೆತ್ತು, ಜೋಡು ಕುದುರೆ ಓಟದ ಸ್ಪರ್ಧೆ: ಕೇಕೆ ಹಾಕಿ ಸಂಭ್ರಮಿಸಿದ ರೈತರು

Video: ಹೇಗಿದೆ ನೋಡಿ ಜೋಡೆತ್ತು, ಜೋಡು ಕುದುರೆ ಓಟದ ಸ್ಪರ್ಧೆ: ಕೇಕೆ ಹಾಕಿ ಸಂಭ್ರಮಿಸಿದ ರೈತರು

ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 27, 2023 | 8:19 PM

ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ಸದಾಶಿವ ಮುತ್ಯಾ ಅವರ ಜಾತ್ರೆ ಪ್ರಯುಕ್ತವಾಗಿ, ಜೋಡೆತ್ತು, ಜೋಡು ಕುದುರೆ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. ಎರಡು ನಿಮಿಷದಲ್ಲಿ ಅತಿವೇಗ ಓಡಿದ ಜೋಡೆತ್ತು, ಜೋಡು ಕುದುರೆಗೆ ಸೂಕ್ತ ಬಹುಮಾನ ಕೂಡ ನೀಡಲಾಗಿದ್ದು, ಓಟ ಕಂಡು ರೈತರು ಖುಷಿ ಪಟ್ಟರು.    

ಬಾಗಲಕೋಟೆ, ಆಗಸ್ಟ್​ 27: ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ನಡೆದ ಜೋಡೆತ್ತು, ಜೋಡು ಕುದುರೆ ಓಟ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸಿತು. ಗ್ರಾಮದ ಸದಾಶಿವ ಮುತ್ಯಾ ಅವರ ಜಾತ್ರೆ ಹಿನ್ನೆಲೆ ಆಯೋಜಿಸಿದ್ದ ಓಟ ಸ್ಪರ್ಧೆ ನೋಡುಗರಿಗೆ ಭರ್ಜರಿ ಹುರುಪು ನೀಡಿದೆ. ಜೋಡು ಕುದುರೆ, ಜೋಡೆತ್ತು ಓಟ ನೋಡಿದ ರೈತರು (Farmers) ಕೇಕೆ ಹಾಕಿ ಸಂಭ್ರಮಿಸಿದರು. ಎರಡು ನಿಮಿಷದಲ್ಲಿ ಅತಿವೇಗ ಓಡಿದ ಜೋಡೆತ್ತು, ಜೋಡು ಕುದುರೆಗೆ ಸೂಕ್ತ ಬಹುಮಾನ ಕೂಡ ನಿಗದಿ ಮಾಡಲಾಗಿತ್ತು. ವರ್ಷವಿಡೀ ದುಡಿದ ರೈತರು ಜೋಡೆತ್ತು, ಜೋಡು ಕುದುರೆ ಓಟ ಮನರಂಜನೆಯಂತಿದ್ದು, ಓಟ ಕಂಡು ಖುಷಿ ಪಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Aug 27, 2023 08:17 PM