ಆನೇಕಲ್ನ ಮಾಯಸಂದ್ರ ಕೆರೆಯಲ್ಲಿ ಬಲೆಗೆ ಬಿದ್ದ ವಿಚಿತ್ರ ಮೀನುಗಳು
ಪ್ರತಿ ವಾರದಂತೆ ಈ ವಾರವು ಟೆಂಡರ್ ಪಡೆದವರು ಮೀನಿಗೆ ಬಲೆ ಹಾಕಿದ್ದಾರೆ. ಈ ವೇಳೆ ಅಪರೂಪದ ಮೀನುಗಳು ಪತ್ತೆಯಾಗಿವೆ. ಕಪ್ಪು-ಬಿಳಿ ಬಣ್ಣದ ಈ ಮೀನುಗಳಿಗೆ ರೆಕ್ಕೆ ಪುಕ್ಕಗಳಿವೆ. ದೇಹದ ಭಾಗ ಕಲ್ಲಿನಂತೆ ಗಟ್ಟಿಯಾಗಿದೆ. ಒಂದೂವರೆಯಿಂದ 2 ಕೆಜಿ ಗಾತ್ರವಿದೆ. ಬಲೆ ಹಾಕಿದಾಗ ನೂರಾರು ಮೀನುಗಳು ಬಲೆಗೆ ಬಿದ್ದಿವೆ.
ಆನೇಕಲ್, ಆ.27: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಾಯಸಂದ್ರ ಕೆರೆಯಲ್ಲಿ ಅಪರೂಪದ ಮೀನುಗಳು ಬಲೆಗೆ ಬಿದ್ದಿವೆ. ವಿಚಿತ್ರ ರೀತಿಯ ಮೀನುಗಳನ್ನು ಕಂಡು ಮೀನುಗಾರ ಅಚ್ಚರಿ ವ್ಯಕ್ತಪಡಿಸಿದ್ದಾನೆ. ಭಾನುವಾರ ಹಿನ್ನೆಲೆ ಮೀನು ಹಿಡಿಯಲು ಇಂದು ಮಾಯಸಂದ್ರ ಕೆರೆಗೆ ಬಂದಿದ್ದಾರೆ. ಪ್ರತಿ ವಾರದಂತೆ ಈ ವಾರವು ಟೆಂಡರ್ ಪಡೆದವರು ಮೀನಿಗೆ ಬಲೆ ಹಾಕಿದ್ದಾರೆ. ಈ ವೇಳೆ ಅಪರೂಪದ ಮೀನುಗಳು ಪತ್ತೆಯಾಗಿವೆ. ಕಪ್ಪು-ಬಿಳಿ ಬಣ್ಣದ ಈ ಮೀನುಗಳಿಗೆ ರೆಕ್ಕೆ ಪುಕ್ಕಗಳಿವೆ. ದೇಹದ ಭಾಗ ಕಲ್ಲಿನಂತೆ ಗಟ್ಟಿಯಾಗಿದೆ. ಒಂದೂವರೆಯಿಂದ 2 ಕೆಜಿ ಗಾತ್ರವಿದೆ. ಬಲೆ ಹಾಕಿದಾಗ ನೂರಾರು ಮೀನುಗಳು ಬಲೆಗೆ ಬಿದ್ದಿವೆ. ಟೆಂಡರ್ ದಾರಾ ಮೀನುಗಳನ್ನು ಮಾರಾಟ ಮಾಡದೆ ಪ್ರತ್ಯೇಕವಾಗಿ ಇಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Latest Videos

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ

ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ

ಕ್ರಿಮಿ ಕೊಲ್ಲಬಾರದೆಂದು ಕುರಾನ್ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
