ಬಾಗಲಕೋಟೆ ಮೋದಿ ಸಮಾವೇಶದಲ್ಲಿ ಕಂಬಳಿ: ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಚರಂತಿಮಠ

| Updated By: ಗಂಗಾಧರ​ ಬ. ಸಾಬೋಜಿ

Updated on: May 01, 2024 | 7:19 PM

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಕಂಬಳಿ ಹಾಕಿಕೊಳ್ಳುವ ಸ್ಟೈಲ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸ್ವಾರಸ್ಯಕರ ಘಟನೆ ಮತ್ತು ಮೋದಿ ಜೊತೆ ನಡೆದ ಸಂಭಾಷಣೆ ಮಾಹಿತಿಯನ್ನು ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಂಚಿಕೊಂಡಿದ್ದಾರೆ.

ಬಾಗಲಕೋಟೆ, ಮೇ 1: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಮಾವೇಶ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಕಂಬಳಿ ಹಾಕಿಕೊಳ್ಳುವ ಸ್ಟೈಲ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸ್ವಾರಸ್ಯಕರ ಘಟನೆ ಮತ್ತು ಮೋದಿ ಜೊತೆ ನಡೆದ ಸಂಭಾಷಣೆ ಮಾಹಿತಿಯನ್ನು ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ (Veeranna Charantimath) ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಕಂಬಳಿ ನೋಡುತ್ತಲೇ ಫುಲ್ ಖುಷಿ ಆದರು. ನಾನು ಶಾಲು ಹಾಕಿದ ಹಾಗೇ ಮೋದಿಗೆ ಎರಡೂ ಕಡೆ ಕಂಬಳಿ ಹಾಕಿದ್ದೆ. ಅದು ಹಾಗಲ್ಲ, ಹೀಗೆ ಹಾಕಿಕೊಳ್ಳಬೇಕು ಎಂದು ಮೋದಿಯವರೇ ಹೇಳಿದ್ರು. ಕಂಬಳಿ ಬಗ್ಗೆ ಮೋದಿ ಅವರಿಗೆ ಬಹಳ ಗೌರವ ಇದೆ. ಕಂಬಳಿ ನೋಡಿದ ಕೂಡಲೇ ಅದನ್ನು ತಗೊಂಡು ಬನ್ನಿ ಅಂತಾ ಹೇಳಿದರು. ಕಂಬಳಿ ಹಾಕಿಕೊಂಡೇ ಭಾಷಣ ಮಾಡಿದರು. ಹೆಲಿಕಾಪ್ಟರ್​ ಬಳಿ ಹೋಗೋವರೆಗೂ ಮೋದಿ ಕಂಬಳಿ ಹಾಕಿಕೊಂಡಿದ್ದರು. ಜೊತೆಗೆ ಸೆಂಗೋಲ್ ಕೂಡ ಪ್ರಧಾನಿ ಮೋದಿಗೆ ನೀಡಿದ್ವಿ. ಸೆಂಗೋಲ್ ಕೊಡಲು ಎಸ್​ಪಿಜಿಯವರು ಮೊದಲು ಅನುಮತಿ ಕೊಡಲಿಲ್ಲ. ಆಗ ಸೆಂಗೋಲ್ ಮಾಡಿಸಿದ್ದೇವೆ, ಆದರೆ ಸಿಬ್ಬಂದಿ ಬಿಡುತ್ತಿಲ್ಲ ಅಂದೆ. ಬಳಿಕ ಮೋದಿಯವರೇ ಸೆಂಗೋಲ್ ತರಿಸಿಕೊಂಡರು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.