ಪ್ರಜ್ವಲ್ ನನಗೆ ಹೇಳಿರುವುದನ್ನು ಎಸ್​ಐಟಿ ಅಧಿಕಾರಿಗಳಿಗೆ ತಿಳಿಸಿದ್ದೇನೆ: ಜಿ ಅರುಣ್, ಪ್ರಜ್ವಲ್ ವಕೀಲ

ಪ್ರಜ್ವಲ್ ನನಗೆ ಹೇಳಿರುವುದನ್ನು ಎಸ್​ಐಟಿ ಅಧಿಕಾರಿಗಳಿಗೆ ತಿಳಿಸಿದ್ದೇನೆ: ಜಿ ಅರುಣ್, ಪ್ರಜ್ವಲ್ ವಕೀಲ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2024 | 7:44 PM

ಎಸ್​ಐಟಿ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ಯಾವುದೇ ಪ್ರತಿಕ್ರಿಯೆ ಇನ್ನೂ ಬಂದಿಲ್ಲ, ಅದರೆ ಕಾನೂನು ವ್ಯಾಪ್ತಿಯಲ್ಲಿ ಸಂತ್ರಸ್ತರಂತೆ ಅರೋಪಿ ಸ್ಥಾನದಲ್ಲಿರುವವರಿಗೂ ಕೆಲ ಅವಕಾಶಗಳು ಇರುತ್ತವೆ ಎಂದು ವಕೀಲ ಹೇಳಿದರು

ಬೆಂಗಳೂರು: ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಪ್ರಜ್ವಲ್ ರೇವಣ್ಣ (Prajwal Revanna) ಪರ ವಕೀಲ ಜಿ ಅರುಣ್ (G Arun) ತನ್ನ ಕಕ್ಷಿದಾರ ನೀಡಿರುವ ಮಾಹಿತಿಯನ್ನು ಎಸ್​ಐಟಿ ಅಧಿಕಾರಿಗಳಿಗೆ (SIT sleuths) ರವಾನಿಸಿರುವುದಾಗಿ ಹೇಳಿದರು. ವಿದೇಶವೊಂದರಿಂದ ಪ್ರಜ್ವಲ್ ರೇವಣ್ಣ ತಮ್ಮ ವಕೀಲ ಅರುಣ್ ಅವರಿಗೆ ಮೇಲೊಂದನ್ನ ಮಾಡಿದ್ದು, ಎಸ್ ಐಟಿ ಮುಂದೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೋರಲು ತಿಳಿಸಿದ್ದರಂತೆ, ಅದನ್ನೇ ತಾನು ಸಿಐಡಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅರುಣ್ ಹೇಳಿದರು. ಎಸ್​ಐಟಿ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ಯಾವುದೇ ಪ್ರತಿಕ್ರಿಯೆ ಇನ್ನೂ ಬಂದಿಲ್ಲ, ಅದರೆ ಕಾನೂನು ವ್ಯಾಪ್ತಿಯಲ್ಲಿ ಸಂತ್ರಸ್ತರಂತೆ ಅರೋಪಿ ಸ್ಥಾನದಲ್ಲಿರುವವರಿಗೂ ಕೆಲ ಅವಕಾಶಗಳು ಇರುತ್ತವೆ ಎಂದು ವಕೀಲ ಹೇಳಿದರು. ಪ್ರಜ್ವಲ್ ಮೇ ರಂದು ಭಾರತಕ್ಕೆ ವಾಪಸ್ಸಾಗುವ ಬಗ್ಗೆ ಹಬ್ಬಿರುವ ವದಂತಿ ಬಗ್ಗೆ ತಾನು ಪ್ರತಿಕ್ರಿಯೆ ನೀಡಲ್ಲ, ತನ್ನ ಮತ್ತು ಕಕ್ಷಿದಾರನ ನಡುವೆ ಮೇಲ್ ಗಳ ಮೂಲಕ ನಡೆದಿರುವ ವಿಚಾರ ವಿನಿಮಯದ ಆಧಾರದಲ್ಲಿ ತಾನು ಮಾತಾಡುತ್ತಿರುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್: SIT ತನಿಖೆಗೆ ಸಂತ್ರಸ್ತೆಯರು ಹಿಂದೇಟು!