ಆಸ್ತಿಗಾಗಿ ವ್ಯಕ್ತಿಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ: ಪತ್ನಿ, ಮಕ್ಕಳಿಂದ ಧರಣಿ

Edited By:

Updated on: Sep 07, 2026 | 2:02 PM

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಆಸ್ತಿ ವಿವಾದವು ಅಮಾನವೀಯ ರೂಪ ತಾಳಿದೆ. ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಸಿಕ್ಕಿಲ್ಲವೆಂದು ಮಕ್ಕಳು ಮೃತ ತಂದೆ ಯಲ್ಲಪ್ಪ ವಾಗೇನವರ್ ಅವರ ಶವವನ್ನೇ ತಹಶೀಲ್ದಾರ್ ಕಚೇರಿ ಮುಂದೆ ತಂದು ಪ್ರತಿಭಟನೆ ನಡೆಸಿದ್ದಾರೆ. ಜೀವಂತವಾಗಿದ್ದಾಗಲೂ ಇದ್ದ ಆಸ್ತಿ ಕಿತ್ತಾಟ ಮರಣದ ನಂತರವೂ ಮುಂದುವರಿದಿದೆ. ನ್ಯಾಯಕ್ಕಾಗಿ ಕುಟುಂಬಸ್ಥರು ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಬಾಗಲಕೋಟೆ, ಸೆಪ್ಟೆಂಬರ್​​ 07: ಆಸ್ತಿ ಸಮನಾಗಿ ಹಂಚುವಂತೆ ಆಗ್ರಹಿಸಿ ಪತ್ನಿಯರು, ಮಕ್ಕಳು ಧರಣಿ ತಹಶೀಲ್ದಾರ್​​ ಕಚೇರಿ ಮುಂದೆ ಶವವಿಟ್ಟು ಪ್ರತಿಭಟಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ತಹಶೀಲ್ದಾರ್​​ ಕಚೇರಿ ಬಳಿ ನಡೆದಿದೆ. ಜಮಖಂಡಿಯ ಅವಟಿ ಗಲ್ಲಿ ನಿವಾಸಿ ಯಲ್ಲಪ್ಪ ವಾಗೆಣ್ಣವರ(76) ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಮೊದಲ ಪತ್ನಿಗೆ ಓರ್ವ ಮಗನಿದ್ದು, 2ನೇ ಪತ್ನಿಗೆ ಐವರು ಗಂಡು ಮಕ್ಕಳು, ಒಬ್ಬಳು ಹೆಣ್ಣುಮಗಳು ಇದ್ದಾರೆ. ಈ ಪೈಕಿ 2ನೇ ಪತ್ನಿಯ ಇಬ್ಬರು ಮಕ್ಕಳು 2 ಎಕರೆ 15 ಗುಂಟೆ ಭೂಮಿ ಯಾರಿಗೂ ತಿಳಿಯದಂತೆ ಮಾರಿದ್ದು, ಈಗಾಗಲೇ ಜಮೀನು ಮಾರಿರೋದನ್ನು ತಡೆಹಿಡಿಯಬೇಕು. ನಮ್ಮ ಪಾಲಿಗೆ ಬರುವ ಆಸ್ತಿಯನ್ನು ಸಮಾನವಾಗಿ ಹಂಚಬೇಕು ಎಂದು ಮೊದಲ ಪತ್ನಿ, ಮಗ ಹಾಗೂ 2ನೇ ಪತ್ನಿ ಸೇರಿ ಮೂವರು ಮಕ್ಕಳು ಪಟ್ಟು ಹಿಡಿದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More