ಮೋದಿ ಪ್ರಧಾನಿಯಾಗಲೆಂದು ಹರಕೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಮಾಡಿದ್ದ ರಾಮ ಭಕ್ತನಿಗೆ ನಿರಾಸೆ

Edited By:

Updated on: Jun 06, 2024 | 3:55 PM

ಬಾಗಲಕೋಟೆ ‌ಜಿಲ್ಲೆ ಇಳಕಲ್ ತಾಲ್ಲೂಕಿನ ಬಂಡರಗಲ್ ಗ್ರಾಮದ ಮುತ್ತು ಕರಮುಡಿ, ಏಪ್ರಿಲ್ 1 ರಂದು ಬಂಡರಗಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಜೂನ್ 1 ಕ್ಕೆ 2000 ಕಿಮೀ ಪಾದಯಾತ್ರೆ ಮೂಲಕ ಬಂದು ತಲುಪಿದ್ದಾರೆ. ಆದರೆ ಗರ್ಭಗುಡಿ ದ್ವಾರದ ಮುಂದೆ ನಿಂತು ರಾಮ ದರ್ಶನಕ್ಕೆ ಅವಕಾಶ ಸಿಗದಿದ್ದಕ್ಕೆ ವಿಡಿಯೋ ಮೂಲಕ ನಿರಾಸೆ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ, ಜೂನ್​ 06: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ನಿರ್ಮಾಣ ಆದಾಗಿನಿಂದ ಸಾಕಷ್ಟು ರಾಮ ಭಕ್ತರು ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ರಾಮ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಆದರೆ ಅಯೋಧ್ಯೆವರೆಗೂ ಪಾದಯಾತ್ರೆ ಮಾಡಿದ ಇಲ್ಲೊಬ್ಬ ರಾಮ ಭಕ್ತನಿಗೆ ಗರ್ಭಗುಡಿ ದ್ವಾರದ ಮುಂದೆ ನಿಂತು ರಾಮನ ದರ್ಶನಕ್ಕೆ ಅವಕಾಶ ಸಿಗದಿದ್ದಕ್ಕೆ ನಿರಾಸೆ ಆಗಿದೆ. ಈ ಕುರಿತಾಗಿ ವಿಡಿಯೋ ಮಾಡಿರುವ ಬಾಗಲಕೋಟೆ (Bagalkote) ‌ಜಿಲ್ಲೆ ಇಳಕಲ್ ತಾಲ್ಲೂಕಿನ ಬಂಡರಗಲ್ ಗ್ರಾಮದ ಮುತ್ತು ಕರಮುಡಿ, ಏಪ್ರಿಲ್ 1 ರಂದು ಬಂಡರಗಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಜೂನ್ 1 ಕ್ಕೆ 2000 ಕಿಮೀ ಪಾದಯಾತ್ರೆ ಮೂಲಕ ಬಂದು ತಲುಪಿದ್ದಾರೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಲವ್ ಜಿಹಾದ್ ನಡೆಯಬಾರದು. ಹಿಂದು ಹೆಣ್ಮಕ್ಕಳ ರಕ್ಷಣೆಯಾಗಬೇಕು ಹೀಗೆ ಹಲವು ಹರಕೆ ಹೊತ್ತು ಅಯೋಧ್ಯೆ ಪಾದಯಾತ್ರೆ ಕೈಗೊಂಡಿದ್ದರು. ನನ್ನ ಹರಕೆಗಳಲ್ಲಿ ಒಂದಾದ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ಈಡೇರಿದಂತಾಗಿದೆ. ನನ್ನ ಎಲ್ಲ ಹರಕೆಗಳನ್ನು ರಾಮನ ಗರ್ಭಗುಡಿ ದ್ವಾರದ ಮುಂದೆ ನಿಂತು ಬೇಡಿಕೊಳ್ಳಬೇಕು.‌ ರಾಮನಿಗೆ ಅರ್ಪಿಸಬೇಕು‌. ಆದರೆ ಗರ್ಭಗುಡಿ ಮುಂದೆ ನಿಂತು ದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ಇಲ್ಲಿ ಪಾದಯಾತ್ರೆ ಮಾಡಿಕೊಂಡು ಬಂದವರಿಗೆ ಬೆಲೆ‌ಕೊಡುತ್ತಿಲ್ಲ‌. ಅಯೋಧ್ಯೆ ಕಮೀಟಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನನಗೆ ಗರ್ಭಗುಡಿ ‌ಮುಂದೆ ನಿಂತು ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More