ಉಕ್ಕಿ ಹರಿಯುತ್ತಿರುವ ಬೈದುವಳ್ಳಿ ಹಳ್ಳ, ಮೂರು ಊರುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ
ಪಶ್ಚಿಮ ಘಟ್ಟ ಪ್ರದೇಶ, ಉತ್ತರ ಕನ್ನಡ ಜಿಲ್ಲೆ, ಮಲೆನಾಡು ಪ್ರದೇಶ ಮತ್ತು ಕಿತ್ತೂರು ಕರ್ನಾಟಕ ಭಾಗಗಳಲ್ಲಿ ನಿನ್ನೆಯಿಂದ ಒಂದೇ ಸಮ ಮಳೆ ಸುರಿಯುತ್ತಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಘಾಟ್ ಪ್ರದೇಶಗಳಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಸೇತುವೆಗಳ ಮರುನಿರ್ಮಾಣಕ್ಕೆ ಸರ್ಕಾರ ಮುಂದಾಗುವ ಅವಶ್ಯಕತೆ ಸ್ಪಷ್ಟವಾಗಿ ಕಾಣುತ್ತಿದೆ.
ಚಿಕ್ಕಮಗಳೂರು, ಜೂನ್ 26: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಿನ್ನೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ ಮತ್ತು ತಾಲೂಕಿನಲ್ಲಿರುವ ಹಳ್ಳಕೊಳ್ಳಗಳೆಲ್ಲ ಉಕ್ಕಿ ಹರಿಯುತ್ತಿವೆ. ಪಶ್ಚಿಮ ಘಟ್ಟ ಪ್ರದೇಶದಲ್ಲೂ (Western Ghats region) ಸತತವಾಗಿ ಮಳೆ ಆಗುತ್ತಿದೆ. ದೃಶ್ಯಗಳಲ್ಲಿ ಕಾಣುತ್ತಿರೋದು ಬೈದುವಳ್ಳಿ ಹಳ್ಳ. ಇದು ಯಾವಮಟ್ಟಿಗೆ ಉಕ್ಕಿ ಹರಿಯುತ್ತದೆ ಎಂದರೆ, ಬಾಳೆಗದ್ದೆ, ಗುತ್ತಿ ಮತ್ತು ದೇವರಮನೆ ಊರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಈ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಆ ಭಾಗದಲ್ಲಿ ಒಂದಷ್ಟು ವಾಹನಗಳು ನಿಂತಿರುವುದನ್ನು ಮತ್ತು ಅವು ಬಂದ ದಾರಿಗೆ ವಾಪಸ್ಸು ಹೋಗುವುದನ್ನು ನೋಡಬಹುದು.
ಇದನ್ನೂ ಓದಿ: ಮಳೆಯಲ್ಲೂ ಹೊತ್ತಿ ಉರಿದ ಕಾರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ