ನೆಲಮಂಗಲದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸಿದ ಬಜರಂಗ ದಳ ಕಾರ್ಯಕರ್ತರು, ವಾಹನ ಚಾಲಕ ಪರಾರಿ

ನೆಲಮಂಗಲದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸಿದ ಬಜರಂಗ ದಳ ಕಾರ್ಯಕರ್ತರು, ವಾಹನ ಚಾಲಕ ಪರಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 22, 2023 | 10:36 AM

ಬಜರಂಗದಳ ಕಾರ್ಯಕರ್ತರನ್ನು ನೋಡುತ್ತಿದ್ದಂತೆಯೇ ವಾಹನದ ಚಾಲಕ ಪರಾರಿಯಾಗಿದ್ದಾನೆ. ವಾಹನದ ಕ್ಯಾಬಿನ್ ತಪಾಸಣೆ ನಡೆಸಿದ ಪೊಲೀಸರಿಗೆ ಒಂದು ರಾಡ್ ಮತ್ತೊಂದು ಚಾಕು ಸಿಕ್ಕಿವೆ. ವಾಹನದಲ್ಲಿದ್ದ ಜಾನುವಾರುಗಳನ್ನು ಡಾಬಸ್ ಪೇಟೆಯಲ್ಲಿರುವ ಗೋಶಾಲೆಗೆ ರವಾನಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಇದು ಕಳೆದ ರಾತ್ರಿ ನಡೆದ ಪ್ರಕರಣ. ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ರಾಣೆಯ ವ್ಯಾಪ್ತಿಯಲ್ಲಿ ಹಸುಗಳನ್ನು ಕಸಾಯಿಖಾನೆಗೆ (slaughter house) ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶ ವಶಕ್ಕೆ ಪಡೆದಿದ್ದಾರೆ. ಅಸಲಿಗೆ ನಡೆದಿದ್ದೇನೆಂದರೆ, ವಿಡಿಯೋದಲ್ಲಿ ಕಾಣುತ್ತಿರುವ ವಾಹನನದಲ್ಲಿ ವ್ಯಕ್ತಿಯೊಬ್ಬ 5 ಹಸು (cows), 1 ಎಮ್ಮೆ (buffalo) ಹಾಗೂ 2 ಕರುಗಳನ್ನು (calves) ಸಾಗಿಸುತ್ತಿದ್ದ ಸಂಗತಿ ಸ್ಥಳೀಯ ಬಜರಂಗದಳ ಕಾರ್ಯಕರ್ತರಿಗೆ (Bajrang Dal activists) ಗೊತ್ತಾಗಿದೆ. ಅವರು ಕೂಡಲೇ ವಾಹನವನ್ನು ಅಡ್ಟಗಟ್ಟಿ ಮತ್ತು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಜರಂಗದಳ ಕಾರ್ಯಕರ್ತರನ್ನು ನೋಡುತ್ತಿದ್ದಂತೆಯೇ ವಾಹನದ ಚಾಲಕ ಪರಾರಿಯಾಗಿದ್ದಾನೆ. ವಾಹನದ ಕ್ಯಾಬಿನ್ ತಪಾಸಣೆ ನಡೆಸಿದ ಪೊಲೀಸರಿಗೆ ಒಂದು ರಾಡ್ ಮತ್ತೊಂದು ಚಾಕು ಸಿಕ್ಕಿವೆ. ವಾಹನದಲ್ಲಿದ್ದ ಜಾನುವಾರುಗಳನ್ನು ಡಾಬಸ್ ಪೇಟೆಯಲ್ಲಿರುವ ಗೋಶಾಲೆಗೆ ರವಾನಿಸಲಾಗಿದೆ. ನೆಲಮಂಗಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ಜಾಲ ಬೀಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ