ತ್ರಿವರ್ಣ ಧ್ವಜಕ್ಕೆ ಅಪಮಾನ; ಕುಸ್ತಿಪಟು ಬಜರಂಗ್ ಪುನಿಯಾ ವಿರುದ್ಧ ಗಂಭೀರ ಆರೋಪ

ತ್ರಿವರ್ಣ ಧ್ವಜಕ್ಕೆ ಅಪಮಾನ; ಕುಸ್ತಿಪಟು ಬಜರಂಗ್ ಪುನಿಯಾ ವಿರುದ್ಧ ಗಂಭೀರ ಆರೋಪ
|

Updated on:Aug 17, 2024 | 8:44 PM

Bajrang Punia: ಜನಸಂದಣಿಯನ್ನು ನಿಭಾಯಿಸುವ ತುರ್ತಿನಲ್ಲಿದ್ದ ಬಜರಂಗ್, ಕಾರಿನ ಬಾನೆಟ್​ ಮೇಲೆ ಅಂಟಿಸಿದ್ದ ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ನಿಂತಿದ್ದರು. ಬಜರಂಗ್ ಉದ್ದೇಶ ಪೂರ್ವಕವಾಗಿ ಈ ಕೆಲಸ ಮಾಡದಿದ್ದರೂ ವೈರಲ್ ವಿಡಿಯೋವನ್ನು ಗಮನಿಸಿದವರು ಶೂ ಹಾಕಿಕೊಂಡು ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ಬಜರಂಗ್ ನಿಂತಿರುವುದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ನ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ಅಧಿಕ ತೂಕ ಹೊಂದಿದಕ್ಕಾಗಿ ಪದಕದ ಸುತ್ತಿನಿಂದ ಅನರ್ಹಗೊಂಡಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಇಂದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಅವರನ್ನು ಸ್ವಾಗತಿಸಲು ಸಾವಿರಾರು ಜನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ತನಗೆ ಸಿಕ್ಕ ಭವ್ಯ ಸ್ವಾಗತವನ್ನು ನೋಡಿದ ವಿನೇಶ್ ಫೋಗಟ್ ಕೂಡ ಭಾವುಕರಾದರು. ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ಸಾವಿರಾರು ಕ್ರೀಡಾಭಿಮಾನಿಗಳ ಜೊತೆಗೆ ಅವರ ಸಹ ಕುಸ್ತಿಪಟುಗಳು ಸಹ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅದರಲ್ಲಿ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಕೂಡ ಸೇರಿದ್ದರು. ಈ ಸಮಯದಲ್ಲಿ, ಬಜರಂಗ್ ಪೂನಿಯಾ ಒಂದು ತಪ್ಪು ಮಾಡಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ವಾಸ್ತವವಾಗಿ, ಬಜರಂಗ್ ಪುನಿಯಾ ಅವರು ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿನೇಶ್ ಫೋಗಟ್ ಅವರನ್ನು ತೆರೆದ ಕಾರಿನಲ್ಲಿ ಕೂರಿಸಿಕೊಂಡು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಜನಸಂದಣಿಯನ್ನು ನಿಭಾಯಿಸುವ ಸಲುವಾಗಿ ಬಜರಂಗ್ ಕಾರಿನ ಬಾನೆಟ್ ಮೇಲೆ ನಿಂತು, ಮೆರವಣಿಗೆಗೆ ಅನುವು ಮಾಡಿಕೊಡುತ್ತಿದ್ದರು. ಆದರೆ ಜನಸಂದಣಿಯನ್ನು ನಿಭಾಯಿಸುವ ತುರ್ತಿನಲ್ಲಿದ್ದ ಬಜರಂಗ್ ಕಾರಿನ ಬಾನೆಟ್​ ಮೇಲೆ ಅಂಟಿಸಿದ್ದ ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ನಿಂತಿದ್ದರು. ಬಜರಂಗ್ ಉದ್ದೇಶ ಪೂರ್ವಕವಾಗಿ ಈ ಕೆಲಸ ಮಾಡದಿದ್ದರೂ ವೈರಲ್ ವಿಡಿಯೋವನ್ನು ಗಮನಿಸಿದವರು ಶೂ ಹಾಕಿಕೊಂಡು ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ಬಜರಂಗ್ ನಿಂತಿರುವುದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

Published On - 8:41 pm, Sat, 17 August 24

Follow us