ಉಡುಪಿ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದವನನ್ನು ಜೀವದ ಹಂಗು ತೊರೆದು ಕಾಪಾಡಿದ ಸ್ಥಳೀಯ ಯುವಕರು!
ಗಣೇಶ್ ಕುಂದರ್ ಮತ್ತು ಹರ್ಷ ಕುಂದರ್ ಮತ್ತು ಅವರೊಂದಿಗಿದ್ದ ಯುವಕರು ಕೇವಲ ಕೋಸ್ಟ್ ಗಾರ್ಡ್ ಗಳು ಮಾಡುಬಹುದಾದ ಕೆಲಸವನ್ನು ನಿರ್ಭೀತಿಯಿಂದ ಮಾಡಿದ್ದಾರೆ. ಮುಳುಗುವವನ ವಿಡಿಯೋ ಮಾಡುತ್ತ ವಿಕೃತಾನಂದ ಅನುಭವಿಸುವ ಜನರ ನಡುವೆ ಕುಂದರ್ ಮತ್ತು ಇತರ ಯುವಕರು ಹೀರೋಗಳಂತೆ ಗೋಚರಿಸುತ್ತಾರೆ. ಅವರಿಗೊಂದು ಸಲಾಂ!
ಉಡುಪಿ: ನೀರು, ಗಾಲಿ ಮತ್ತು ಬೆಂಕಿಯೊಂದಿಗೆ ಯಾವತ್ತಿಗೂ ಸರಸ ಸಲ್ಲದು ಅಂತ ನಮ್ಮ ಹಿರಿಯರು ಹೇಳಿದ್ದು ಹಾಗೆ ಸುಮ್ಮನೆ ಅಲ್ಲ ಮಾರಾಯ್ರೇ. ಇಲ್ನೋಡಿ ಉಡುಪಿಯ ಹೂಡೆ ಬಳಿ ಪ್ರವಾಸಕ್ಕೆಂದು ಬಂದ ಯುವಕರು ಮೋಜು ಮಾಡುತ್ತ ಅರಬ್ಬೀ ಸಮುದಕ್ಕಿಳಿದಿದ್ದಾರೆ. ಆದರೆ ಸಮುದ್ರದಲ್ಲಿ ಅಲೆಗಳ ಭರಾಟೆ ಜೋರಾಗಿದ್ದ ಕಾರಣ ಒಬ್ಬ ಅವುಗಳ ರಭಸಕ್ಕೆ ಸಮುದ್ರದೊಳಗೆ ಕೊಚ್ಚಿಕೊಂಡು ಹೋಗಿದ್ದಾನೆ. ಸಮುದ್ರದ ದೊಡ್ಡ ಅಲೆಗಳ ಹೊಡೆತಕ್ಕೆ ಬಹಳ ದೂರದರೆಗೆ ಹೋದ ಯುವಕನನ್ನು ತೀರದಲ್ಲಿದ್ದ ಸ್ಥಳೀಯರು ಗಮನಿಸಿದ್ದಾರೆ. ಮುಳುಗುತ್ತಾ ಮೇಲೇಳುತ್ತಾ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ಯುವಕನ ರಕ್ಷಣೆಗೆ ಹರ್ಷ ಕುಂದರ್ ಮತ್ತು ಗಣೇಶ್ ಕುಂದರ್ ಹೆಸರಿನ ನೇತೃತ್ವದ ಒಂದಷ್ಟು ಯುವಕರು ಸಮುದ್ರಕ್ಕೆ ಧುಮುಕಿ ಅವನನ್ನು ರಕ್ಷಿಸಿದ್ದಾರೆ. ತಮ್ಮ ಜೀವದ ಹಂಗು ತೊರೆದು ಮತ್ತೊಬ್ಬನ ಜೀವವುಳಿಸಿದ ಯುವಕರ ಸಾಹಸ ಶ್ಲಾಘನೀಯ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್ಮೆಂಟ್ ಅನಿಸಿಕೊಳ್ಳ್ಳುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Udupi News: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು, ನೀರಿಗೆ ಬೀಳುತ್ತಿರುವ ದೃಶ್ಯ ಗೆಳೆಯನ ಮೊಬೈಲ್ನಲ್ಲಿ ಸೆರೆ