ಸೆಕ್ಷನ್ 17 (ಎ) ಎಸ್ಒಪಿಯ ಮಾರ್ಗಸೂಚಿಯನ್ನು ಮಾಧ್ಯಮಕ್ಕೆ ವಿವರಿಸಿದ ಸಚಿವ ಕೃಷ್ಣ ಭೈರೇಗೌಡ
ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಮುರಗೇಶ್ ನಿರಾಣಿ, ಮಾಜಿ ಸಚಿವೆ ಶಕುಂತಲಾ ಜೊಲ್ಲೆ, ಮಾಜಿ ಸಚಿವ ಜನಾರ್ಧನ ರೆಡ್ಡಿ ಮೊದಲಾದವರ ವಿರುದ್ಧ ಪೊಲೀಸ್ ಅಧಿಕಾರಿಗಳು ಮತ್ತು ಲೋಕಾಯುಕ್ತ ಅಧಿಕಾರಿಗಳು ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದರೂ ಗವರ್ನರ್ ಗಳು ಅದನ್ನು ನೀಡಿರಲಿಲ್ಲ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಬೆಂಗಳೂರು: ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ ಕಾನೂನನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ ಅನ್ನೋದು ನಿರ್ವಿವಾದಿತ. ಸದನದಲ್ಲಿ ಅವರು ಮಾತಾಡಲು ಎದ್ದು ನಿಂತಾಗಲೂ ಸಮರ್ಪಕವಾಗಿ ಮಾತಾಡುತ್ತಾರೆ. ಇವತ್ತು ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಜ್ಯಪಾಲರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೀಡಿಯಾಗೆ ಬ್ರೀಫ್ ಮಾಡುತ್ತಿದ್ದಾಗ, ಒಂದು ಹಂತದಲ್ಲಿ ಅವರನ್ನು ನಿಲ್ಲಿಸಿ ಮಾತಾಡಲು ಆರಂಭಿಸಿದ ಭೈರೇಗೌಡ, ಪ್ರಾಸಿಕ್ಯೂಷನ್ ಗೆ ಸಂಬಂಧಿಸಿದ ಕಾನೂನನ್ನು ವಿಶದವಾಗಿ ಮನದಟ್ಟಾಗುವಂತೆ ವಿವರಿಸಿದರು.
ಸೆಪ್ಟಂಬರ್, 2021 ರಲ್ಲಿ ಭಾರತ ಸರ್ಕಾರವು ಸೆಕ್ಷನ್ 17 (ಎ) ರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಮಾರ್ಗಸೂಚಿಯನ್ನು ಎಲ್ಲ ರಾಜ್ಯಗಳಿಗೆ ಬಿಡುಗಡೆ ಮಾಡಿದ್ದು ಅದರ ಪ್ರಕಾರ ಯಾವುದೇ ಒಬ್ಬ ಸರ್ಕಾರಿ ನೌಕರನ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬ ತನಿಖೆ ನಡೆಸಬೇಕಾದರೆ ಅವರು ರಾಜ್ಯಪಾಲರಿಂದ ಅನುಮತಿ ಪಡೆದಿರಬೇಕು.
ಆದರೆ ಸಿದ್ದರಾಮಯ್ಯನವರ ಪ್ರಕರಣದಲ್ಲಿ ಯಾವುದೇ ಪೊಲೀಸ್ ಅಧಿಕಾರಿಗೆ ಗವರ್ನರ್ ಬಳಿ ಹೋಗಿ ಪಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿಲ್ಲ, ಹಾಗಾಗಿ ಸೆಕ್ಷನ್ 17 (ಎ) ಪ್ರಕಾರ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವುದೇ ತಪ್ಪು ಎಂದು ಭೈರೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕೆಪಿಸಿಸಿ ಸೂಚನೆ