ತುಂಗಭದ್ರಾ ಜಲಾಶಯ ಗೇಟ್‌ ದುರಸ್ತಿ ಕಾರ್ಯ; ಮೂರನೇ ಎಲಿಮೆಂಟ್​ನ್ನು ಯಶಸ್ವಿಯಾಗಿ ಅಳವಡಿಸಿದ ಸಿಬ್ಬಂದಿ

ತುಂಗಭದ್ರಾ ಜಲಾಶಯ ಗೇಟ್‌ ದುರಸ್ತಿ ಕಾರ್ಯ; ಮೂರನೇ ಎಲಿಮೆಂಟ್​ನ್ನು ಯಶಸ್ವಿಯಾಗಿ ಅಳವಡಿಸಿದ ಸಿಬ್ಬಂದಿ

ಕಿರಣ್ ಹನುಮಂತ್​ ಮಾದಾರ್
|

Updated on:Aug 17, 2024 | 5:13 PM

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಬಳಿಕ ಡ್ಯಾಂ​​​ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿ, ಮೂರನೇ ಎಲಿಮೆಂಟ್​ನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಈ ಮೂಲಕ ಹರಿಯುವ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಪ್ಪಳ, ಆ.17: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ಗೇಟ್ ತುಂಡಾಗಿ ನೀರುಪಾಲಾಗಿತ್ತು. ಕೂಡಲೇ ಎಚ್ಚೆತ್ತ ಸರ್ಕಾರ, ಹೊಸ ಸ್ಟಾಪ್​​ಲ್ಯಾಗ್ ಗೇಟ್​ ಅಳವಡಿಸಲು ಸೂಚಿಸಿತ್ತು. ಅದರಂತೆ ಡ್ಯಾಂ​​​ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿ, ಮೂರನೇ ಎಲಿಮೆಂಟ್​ನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಈ ಮೂಲಕ ಹರಿಯುವ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆಗಸ್ಟ್ 10 ರಿಂದ ನಿರಂತರವಾಗಿ ನೀರು ಹರಿದು ವ್ಯರ್ಥವಾಗಿ ಹೋಗುತ್ತಿತ್ತು. ಕ್ರಸ್ಟಗೇಟ್ 19 ಕೊಚ್ಚಿಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಇದೀಗ ಮೂರನೇ ಎಲಿಮೆಂಟ್ ಕೂಡ ಅಳವಡಿಕೆ ಮಾಡಲಾಗಿದ್ದು, ನೀರನ್ನು ಬಂದ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಯ್ಯನಾಯ್ಡುಗೆ ಧನ್ಯವಾದ ಹೇಳಿದ ಡಿ.ಕೆ.ಶಿವಕುಮಾರ್

ಹರಿಯುವ ನೀರನ್ನು ನಿಲ್ಲಿಸುವಲ್ಲಿ ಸಿಬ್ಬಂದಿಗಳು ಸಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರಸ್ಟಗೇಟ್ ತಜ್ಞ ಕನ್ನಯ್ಯನಾಯ್ಡು ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ‘ ಧನ್ಯವಾದ ಹೇಳಿದ್ದಾರೆ. ಈ ಗೇಟ್ ದುರಸ್ತಿ ಕೆಲಸ ನಿರ್ವಹಿಸುವಲ್ಲಿ ಕನ್ನಯ್ಯ ನಾಯ್ಡು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಕೈ ಮುಖಂಡ ಶ್ರೀನಿವಾಸ ರೆಡ್ಡಿ ಮೊಬೈಲ್​ಗೆ ಕರೆ ಮಾಡಿ ಮಾತನಾಡಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 17, 2024 04:03 PM