ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ; ವೇದಿಕೆ ಮೇಲೆ ಏಕಾಏಕಿ ನುಗ್ಗಿದ ಯುವಕ, ಮುಂದೇನಾಯ್ತು ನೋಡಿ
ಸಿಎಂ ಸಿದ್ದರಾಮಯ್ಯ(Siddaramaiah) ಭಾಗಿಯಾಗಿದ್ದ ಸರ್ಕಾರಿ ನೌಕರರ ನಮ್ಮಭಿಮಾನದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ಕಂಡುಬಂದಿದ್ದು, ಸಿಎಂ ಭಾಷಣ ಮುಗಿದ ಕೂಡಲೇ ಕಾಲಿಗೆ ಬೀಳಲು ವೇದಿಕೆ ಮೇಲೆ ಏಕಾಏಕಿ ಯುವಕನೋರ್ವ ಓಡೋಡಿ ಬಂದ ಘಟನೆ ನಡೆದಿದೆ.
ಬೆಂಗಳೂರು, ಆ.17: ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ನಮ್ಮಭಿಮಾನದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ(Siddaramaiah) ಭಾಗಿಯಾಗಿದ್ದು, ಈ ವೇಳೆ ಭದ್ರತಾ ವೈಫಲ್ಯ ಕಂಡುಬಂದಿದೆ. ಸಿಎಂ ಭಾಷಣ ಮುಗಿದ ಕೂಡಲೇ ಕಾಲಿಗೆ ಬೀಳಲು ವೇದಿಕೆ ಮೇಲೆ ಏಕಾಏಕಿ ಯುವಕನೋರ್ವ ಓಡೋಡಿ ಬಂದಿದ್ದಾನೆ. ಕೂಡಲೇ ವೇದಿಕೆ ಮೇಲೆ ಬಂದಿದ್ದ ಯುವಕನನ್ನ ತಡೆದ ಪೊಲೀಸರು, ವಶಕ್ಕೆ ಪಡೆದು ವೇದಿಕೆಯಿಂದ ಕರೆದುಕೊಂಡು ಹೋಗಿದ್ದಾರೆ. ಆ ಯುವಕ ಪಾನಮತ್ತ ಹಾಗೂ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಹೇಳುತ್ತಿದ್ದಾರೆ. ಜೊತೆಗೆ ವೇದಿಕೆ ಮೇಲೆ ಪ್ರವೇಶಿಸಿದ ಯುವಕ ಯಾವುದೇ ಸರ್ಕಾರಿ ನೌಕರನಲ್ಲ, ಹೆಚ್ಚಿನ ವಿಚಾರಣೆಗಾಗಿ ಯುವಕನನ್ನ ಪೊಲೀಸರು ಕರೆದೊಯ್ದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 17, 2024 03:24 PM
Latest Videos