Bakham-Lakhda: ಗುಜರಾತ್ ನ ಬಖಮ್-ಲಾಕ್ಡಾ ಕೇವಲ ಕುಸ್ತಿಯ ಒಂದು ಪ್ರಕಾರವಾಗಿರದೆ ಸಮುದಾಯಗಳನ್ನು ಒಂದುಗೂಡಿಸುವ ಮಾಧ್ಯಮವೂ ಆಗಿದೆ

|

Updated on: Apr 29, 2023 | 8:01 AM

ಕುಸ್ತಿಯಲ್ಲಿ ಕೇವಲ ಶಕ್ತಿ ಮಾತ್ರ ಇದ್ದರೆ ಸಾಲದು ಅದರೊಂದಿಗೆ ಯುಕ್ತಿಯೂ ಬೇಕಾಗುತ್ತದೆ. ಬಖಮ್-ಲಾಕ್ಡಾ ಕೇವಲ ಕ್ರೀಡೆಯಾಗಿರದೆ ಬೇರೆ ಬೇರೆ ಸಮುದಾಯಗಳ ನಡುವೆ ಭ್ರಾತೃತ್ವ ಬೆಳೆಸುವ ಮಾಧ್ಯಮವೂ ಆಗಿದೆ.

ಗುಜರಾತ್ ರಾಜ್ಯದ ಕಛ್ ಪ್ರಾಂತ್ಯದಲ್ಲಿ ಬಖಮ್-ಲಾಕ್ಡಾ (Bakham-Lakhda) ಸಾಂಪ್ರದಾಯಿಕ ಕುಸ್ತಿಯ ಒಂದು ಪ್ರಕಾರವಾಗಿದೆ. ಇದರ ವಿಶೇಷತೆ ಅಂದರೆ, ಇಬ್ಬರು ಪೈಲ್ವಾನನರ ನಡುವೆ ನಡೆಯುವ ಕುಸ್ತಿಯಲ್ಲಿ ಎದುರಾಳಿಯ (opponent) ಮೈಮುಟ್ಟದೆ ನೆಲಕ್ಕೆ ಕೆಡವುವನು ವಿಜಯೀ ಎನಿಸಿಕೊಳ್ಳುತ್ತಾನೆ. ಕುಸ್ತಿಪಟುಗಳ ಸೊಂಟಕ್ಕೆ ಅರ್ಚಕ್ (Archak) ಎಂದು ಕರೆಯುವ ಬೆಲ್ಟ್ ಅನ್ನು ಕಟ್ಟಿರುತ್ತಾರೆ, ಕುಸ್ತಿಪಟುಗಳು ಅವುಗಳನ್ನು ಹಿಡಿದೇ ಸೆಣಸಬೇಕು, ಮೈ ಮುಟ್ಟುವ ಹಾಗಿಲ್ಲ.

‘ಡಬ್ಲ್ಯೂಡಬ್ಲ್ಯೂಈ ಯಲ್ಲಿ ನೀವು ನೋಡುವ ಹಾಗೆ, ಇದರಲ್ಲೂ ಇಬ್ಬರು ಪ್ರತಿಸ್ಪರ್ಧಿಗಳ ನಡುವೆ ಕುಸ್ತಿ ನಡೆಯತ್ತದೆ. ಗೆದ್ದವನು ಮುಂದಿನ ಸುತ್ತಿಗೆ ಹೋಗಿ ಇನ್ನೊಬ್ಬ ಪ್ರತಿಸ್ಪರ್ಧಿಯನ್ನು ಎದುರಿಸುತ್ತಾನೆ. ಇದು ಹೀಗೆಯೇ ಮುಂದುವರಿದುಕೊಂಡು ಹೋಗುತ್ತದೆ. ನಾಕ್ ಔಟ್ ರೌಂಡ್ ಗಳ ಒಂದಾದ ನಂತರ ಒಂದರಂತೆ ನಡೆಯುತ್ತವೆ. ತೂಕದ ಆಧಾರದ ಮೇಲೆ ಸ್ಪರ್ಧಿಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಒಂದರ ನಂತರ ಒಂದು-ಹೀಗೆ 6 ಸುತ್ತುಗಳು ನಡೆಯುತ್ತವೆ. ಎಲ್ಲ ಸುತ್ತುಗಳಲ್ಲಿ ಗೆದ್ದವನು ವಿಜಯೀ ಅನಿಸಿಕೊಳ್ಳುತ್ತಾನೆ,’ ಎಂದು ನಾಲಿಯಾದ ಶ್ರೀ ಸದ್ಗುರು ಚಾರಿಟೇಬಲ್ ಟ್ರಸ್ಟ್ ಭರತ್ ಗ್ರೂಪ್ ನ ಛಾತ್ರ ಸಿಂಗ್ ಜಡೇಜಾ ಹೇಳುತ್ತಾರೆ.

ಇದನ್ನೂ ಓದಿ:  ದಕ್ಷಿಣ ಕನ್ನಡ: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳಕ್ಕೆ ಮತ್ತೆ ನಿಷೇಧದ ತೂಗುಕತ್ತಿ, ಜಿಲ್ಲಾ ಪಶುಸಂಗೋಪನಾ ಇಲಾಖೆಯಿಂದ ನೋಟಿಸ್

ಕುಸ್ತಿಯಲ್ಲಿ ಕೇವಲ ಶಕ್ತಿ ಮಾತ್ರ ಇದ್ದರೆ ಸಾಲದು ಅದರೊಂದಿಗೆ ಯುಕ್ತಿಯೂ ಬೇಕಾಗುತ್ತದೆ. ಬಖಮ್-ಲಾಕ್ಡಾ ಕೇವಲ ಕ್ರೀಡೆಯಾಗಿರದೆ ಬೇರೆ ಬೇರೆ ಸಮುದಾಯಗಳ ನಡುವೆ ಭ್ರಾತೃತ್ವ ಬೆಳೆಸುವ ಮಾಧ್ಯಮವೂ ಆಗಿದೆ.

‘ಇದು ಭಾರತೀಯ ಪರಂಪತೆಯ ಭಾಗವಾಗಿದೆ. ತನ್ನ ಸೋದರಮಾವ ಕಂಸನನ್ನು ಕೊಲ್ಲಲು ಭಗವಾನ್ ಕೃಷ್ಣಾ ಚಕ್ರವ್ಯೂಹ ರಚಿಸಿದ. ಮಲ್ಲಯುದ್ಧದ ಪರಂಪರೆ ಕ್ರಮೇಣ ನಶಿಸುತ್ತಿದೆ. ಮಲ್ಲಯುದ್ಧದಲ್ಲಿ ಇಬ್ಬರ ನಡುವೆ ಸೆಣಸಾಟ ನಡೆದು ಒಬ್ಬ ಗೆಲ್ಲುತ್ತಾನೆ ಮತ್ತೊಬ್ಬ ಸೋಲುತ್ತಾನೆ. ಒಬ್ಬನು ಕಮ್ಮಿ ಮತ್ತೊಬ್ಬನು ಶ್ರೇಷ್ಠ ಅಂತ ಸಾಬೀತು ಮಾಡಲು ನಾವು ಇಲ್ಲಿ ಸೇರೋದಿಲ್ಲ. ಹಿಂದೂ-ಮುಸಲ್ಮಾನರು ಸಹೋದರರು ಅಂತ ತೋರಿಸಲು ನಾವಿಲ್ಲಿ ಸೇರಿಬರುತ್ತೇವೆ,’ ಎಂದು ಸ್ಥಳೀಯ ನಿವಾಸಿ ಕನ್ಹಯ್ಯಲಾಲ್ ಭಾನುಶಾಲಿ ಹೇಳುತ್ತಾರೆ.

ಇದನ್ನೂ ಓದಿ: Big Offer: ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಬರೀ ಐಪಿಎಲ್ ಆಡಲು ವಿದೇಶೀ ಆಟಗಾರರಿಗೆ 50 ಕೋಟಿ ಆಫರ್? ನಿಜವೇ ಆದರೆ ದೇಶಾಭಿಮಾನದ ಕಥೆ?

ಬಖಮ್-ಲಾಕ್ಡಾ ಪಂದ್ಯಾವಳಿಯಲ್ಲಿ ಗೆದ್ದ ಪೈಲ್ವಾನ ರೂ. 11,000 ತನ್ನ ಜೇಬಿಗಳಿಸುವುದರ ಜೊತೆಗೆ ಇತರ ಬಹುಮಾನಗಳನ್ನೂ ತನ್ನವಾಗಿಸಿಕೊಳ್ಳುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ