Big Offer: ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಬರೀ ಐಪಿಎಲ್ ಆಡಲು ವಿದೇಶೀ ಆಟಗಾರರಿಗೆ 50 ಕೋಟಿ ಆಫರ್? ನಿಜವೇ ಆದರೆ ದೇಶಾಭಿಮಾನದ ಕಥೆ?
Foreign Players Approached By IPL Fanchise Owners: ವರದಿಗಳನ್ನು ನಂಬುವುದಾದರೆ ಐಪಿಎಲ್ನ ಫ್ರಾಂಚೈಸಿ ಮಾಲೀಕರು ಕನಿಷ್ಠ 6 ಇಂಗ್ಲೀಷ್ ಆಟಗಾರರನ್ನು ಸಂಪರ್ಕಿಸಿದ್ದು, ನ್ಯಾಷನಲ್ ಕಾಂಟ್ರಾಕ್ಟ್ನಿಂದ ಹೊರಬಂದು ಐಪಿಎಲ್ನಲ್ಲಿ ಪೂರ್ಣಾವಧಿ ಆಡಬೇಕೆಂದು ಕೇಳಿವೆ. ಇದಕ್ಕಾಗಿ ಪ್ರತೀ ಆಟಗಾರರಿಗೂ ವರ್ಷಕ್ಕೆ 51 ಕೋಟಿ ರೂ ಗುತ್ತಿಗೆ ನೀಡಲೂ ಫ್ರಾಂಚೈಸಿಗಳು ಸಮ್ಮತಿಸಿರುವುದು ತಿಳಿದುಬಂದಿದೆ.
ಐಪಿಎಲ್ ಬಗ್ಗೆ ಜನರು ಸುಖಾಸುಮ್ಮನೆ ಮಾತನಾಡಿಕೊಳ್ಳುತ್ತಿದ್ದ ವಿಚಾರವೊಂದು ಯಾಕೋ ಸತ್ಯವಾಗುವಂತೆ ಕಾಣುತ್ತಿದೆ. ಕ್ರಿಕೆಟ್ ಆಟಗಾರರು ಐಪಿಎಲ್ನಲ್ಲಿ (IPL 2023) ಆಡುವಾಗ ವ್ಯಕ್ತಪಡಿಸುವ ಮುತುವರ್ಜಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತೋರುವುದಿಲ್ಲ ಎಂಬ ಮಾತುಗಳನ್ನು ಆಗಾಗ್ಗೆ ಚರ್ಚೆಯಲ್ಲಿ ಕೇಳುತ್ತಿರುತ್ತೇವೆ. ಇದಕ್ಕೆ ಇಂಬು ಕೊಡಲೋ ಎಂಬಂತೆ ಊಹಾಪೋಹದ ಸುದ್ದಿಯೊಂದು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಐಪಿಎಲ್ ಸೇರಿದಂತೆ ವಿವಿಧ ಫ್ರಾಂಚೈಸಿ ಟಿ20 ಲೀಗ್ಗಳಲ್ಲಿ (Franchise T20 Leagues) ಅಡುವ ಸಲುವಾಗಿ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮ ದೇಶದ ರಾಷ್ಟ್ರೀಯ ಗುತ್ತಿಗೆಯಿಂದಲೇ (National Contract) ಹೊರಬರಲು ತಯಾರಾಗಿದ್ದಾರೆ ಎನ್ನುವಂತಹ ಸುದ್ದಿ. ಅಂದರೆ ರಾಷ್ಟ್ರೀಯ ತಂಡಕ್ಕೆ ಅಡುವ ಬದಲು ಪೂರ್ಣಪ್ರಮಾಣದಲ್ಲಿ ಐಪಿಎಲ್ನಲ್ಲೇ ಆಡಲು ಆಟಗಾರರು ಇಚ್ಛಿಸುತ್ತಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗರು ಮಾತ್ರವಲ್ಲ, ಬೇರೆ ಕೆಲ ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಐಪಿಎಲ್ಗೋಸ್ಕರ ದೇಶಾಭಿಮಾನ ತೊರೆಯುತ್ತಿದ್ದಾರೆ ಎನ್ನಲಾಗಿದೆ.
ವರದಿಗಳನ್ನು ನಂಬುವುದಾದರೆ ಐಪಿಎಲ್ನ ಫ್ರಾಂಚೈಸಿ ಮಾಲೀಕರು ಕನಿಷ್ಠ 6 ಇಂಗ್ಲೀಷ್ ಆಟಗಾರರನ್ನು ಸಂಪರ್ಕಿಸಿದ್ದು, ನ್ಯಾಷನಲ್ ಕಾಂಟ್ರಾಕ್ಟ್ನಿಂದ ಹೊರಬಂದು ಐಪಿಎಲ್ನಲ್ಲಿ ಪೂರ್ಣಾವಧಿ ಆಡಬೇಕೆಂದು ಕೇಳಿವೆ. ಇದಕ್ಕಾಗಿ ಪ್ರತೀ ಆಟಗಾರರಿಗೂ ವರ್ಷಕ್ಕೆ 51 ಕೋಟಿ ರೂ ಗುತ್ತಿಗೆ ನೀಡಲೂ ಫ್ರಾಂಚೈಸಿಗಳು ಸಮ್ಮತಿಸಿರುವುದು ತಿಳಿದುಬಂದಿದೆ.
ಇದನ್ನೂ ಓದಿ: WTC Final: ಧೋನಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ಟೀಂ ಇಂಡಿಯಾಕ್ಕೆ ಅಜಿಂಕ್ಯ ರಹಾನೆ ಆಯ್ಕೆ..!
ಆದರೆ, ಐಪಿಎಲ್ನಲ್ಲಿ ಪ್ರತೀ ಫ್ರಾಂಚೈಸಿಗೂ ಇರುವುದು ಸೀಮಿತ ಬಜೆಟ್ ಮಾತ್ರ. ಒಬ್ಬ ಆಟಗಾರನಿಗೆ 51 ಕೋಟಿ ರೂ ಕೊಡುವುದಾದರೂ ಹೇಗೆ ಎಂಬ ಪ್ರಶ್ನೆ ಬರುತ್ತದೆ. ಇಲೈಟ್ ಆಟಗಾರರು ಅಥವಾ ಪ್ರಮುಖ ಆಟಗಾರರಿಗೆ ಮಾತ್ರ ಈ ಆಫರ್ ಕೊಡಬಹುದು ಎಂಬ ಚರ್ಚೆಯೂ ಆಗಿದೆ.
ಸದ್ಯ ಐಪಿಎಲ್ನಲ್ಲಿ ಅಡುತ್ತಿರುವ ಕೆಲ ಪ್ರಮುಖ ವಿದೇಶೀ ಅಟಗಾರರು ಹೆಚ್ಚಿನ ಸಂದರ್ಭದಲ್ಲಿ ಐಪಿಎಲ್ನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಅಗುವುದಿಲ್ಲ. ಐಪಿಎಲ್ ನಡೆಯುತ್ತಿರುವ ಸಂದರ್ಭದಲ್ಲೆ ಅಂತರರಾಷ್ಟ್ರೀಯ ಪಂದ್ಯಗಳೂ ಇರುತ್ತವೆ. ಆಟಗಾರರು ಸಾಮಾನ್ಯವಾಗಿ ತಮ್ಮ ರಾಷ್ಟ್ರೀಯ ತಂಡಕ್ಕೆ ಪ್ರಾಧಾನ್ಯತೆ ನೀಡುತ್ತಾರೆ. ಅಂತಾರಾಷ್ಟ್ರೀಯ ಪದ್ಯಗಳು ಇಲ್ಲದಾಗ ಮಾತ್ರ ಐಪಿಎಲ್ನಲ್ಲಿ ಆಡುತ್ತಾರೆ. ಇದರಿಂದಾಗಿ, ಐಪಿಎಲ್ನ ಕೆಲ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ ಇರುತ್ತಾರೆ. ಇದನ್ನು ತಪ್ಪಿಸಲು ಐಪಿಎಲ್ ಫ್ರಾಂಚೈಸಿ ಮಾಲೀಕರು ಕೆಲ ಆಯ್ದ ವಿದೇಶೀ ಆಟಗಾರರಿಗೆ ದೊಡ್ಡ ಪ್ರಮಾಣದ ಕಾಂಟ್ರಾಕ್ಟ್ ಆಫರ್ ಕೊಡಲು ಸಿದ್ಧ ಇವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Virat Kohli: ಪಂದ್ಯ ಮುಗಿದ ಬಳಿಕ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ: ಕೋಪದಲ್ಲಿ ಆಡಿದ ಮಾತುಗಳೇನು ನೋಡಿ
ರಾಷ್ಟ್ರೀಯ ತಂಡದ ಕಾಂಟ್ರಾಕ್ಟ್ ಬಿಟ್ಟರೆ ಆಟಗಾರರಿಗೂ ಭರ್ಜರಿ ಲಾಭ?
ಸದ್ಯ ಆಟಗಾರರಿಗೆ ಗುತ್ತಿಗೆಗೆ ಅತಿ ಹೆಚ್ಚು ಹಣ ನೀಡುವುದು ಬಿಸಿಸಿಐ ಮಾತ್ರವೇ. ಉಳಿದಂತೆ ವಿಶ್ವದ ಇತರೆಡೆ ಆಟಗಾರರ ಸಂಭಾವನೆ ಅಷ್ಟಕಷ್ಟೇ. ಹೀಗಾಗಿ, ಐಪಿಎಲ್ನಂತಹ ಫ್ರಾಂಚೈಸಿ ಟಿ20 ಲೀಗ್ಗಳತ್ತ ಹೆಚ್ಚೆಚ್ಚು ಆಟಗಾರರು ಆಕರ್ಷಿತರಾಗುತ್ತಿದ್ದಾರೆ. ಐಪಿಎಲ್ ಮಾತ್ರವಲ್ಲ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಯುಎಇ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಇತ್ಯಾದಿ ಕಡೆಯೂ ಟಿ20 ಲೀಗ್ ಟೂರ್ನಿಗಳು ನಡೆಯುತ್ತವೆ. ಒಬ್ಬ ಪ್ರತಿಭಾನ್ವಿತ ಆಟಗಾರ ಇಡೀ ವರ್ಷ ಬ್ಯುಸಿ ಆಗಿರುವಷ್ಟು ಟಿ20 ಲೀಗ್ಗಳು ನಡೆಯುತ್ತವೆ. ಇದರ ಜೊತೆಗೆ ಸಿಂಗಾಪುರ, ದುಬೈ, ಅಮೆರಿಕ ಮೊದಲಾದ ಕಡೆಯೂ ಬಹಳ ಕಮರ್ಷಿಯಲ್ ಎನಿಸುವ ಚುಟುಕು ಕ್ರಿಕೆಟ್ ಟೂರ್ನಿಗಳು ನಡೆಯುತ್ತವೆ. ಇಲ್ಲೆಲ್ಲಾ ಸಖತ್ ವರಮಾನ ಆಟಗಾರರಿಗೆ ಕಾದಿರುತ್ತದೆ. ರಾಷ್ಟ್ರೀಯ ತಂಡಕ್ಕೆ ಆಡಿದರೆ ಸಿಗುವುದಕ್ಕಿಂತ ಹಲವು ಪಟ್ಟು ಹೆಚ್ಚು ಸಂಭಾವನೆ ಟಿ20 ಫ್ರಾಂಚೈಸಿ ಲೀಗ್ಗಳಿಂದ ಸಿಕ್ಕರೆ ಯಾರು ತಾನೆ ಬೇಡ ಎನ್ನುವುದಿಲ್ಲ.
ಕ್ರಿಕೆಟ್ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲೂ ಇಂತಹ ಬೆಳವಣಿಗೆಗಳಾಗಿವೆ. ಪ್ರೊಫೆಷನಲ್ ಬಾಕ್ಸಿಂಗ್, ಪ್ರೊಫೆಷನಲ್ ವ್ರೆಸ್ಲಿಂಗ್ ಹೀಗೆ ರಾಷ್ಟ್ರ ಪ್ರತಿನಿಧಿಸದೆಯೇ ವೈಯಕ್ತಿಕವಾಗಿ ಪಾಲ್ಗೊಳ್ಳಬಹುದಾದ ಮತ್ತು ಒಳ್ಳೆಯ ಆದಾಯ ತರುವ ಟೂರ್ನಿಗಳು ವಿವಿಧ ಕ್ರೀಡೆಗಳಲ್ಲಿವೆ. ಕ್ರಿಕೆಟ್ನಲ್ಲೂ ಇಂಥ ವರ್ಗೀಕರಣ ಆಗಬಹುದು. ವೃತ್ತಿಪರ ಕ್ರಿಕೆಟ್ ಮತ್ತು ಅಮೆಚ್ಯೂರ್ ಕ್ರಿಕೆಟ್ ಎಂದು ಡಿವೈಡ್ ಆದರೆ ಅಚ್ಚರಿ ಇಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Thu, 27 April 23