WTC Final: ಧೋನಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ಟೀಂ ಇಂಡಿಯಾಕ್ಕೆ ಅಜಿಂಕ್ಯ ರಹಾನೆ ಆಯ್ಕೆ..!
WTC Final: ರಹಾನೆ ಕೊನೆಯ ಬಾರಿಗೆ 2022 ರಲ್ಲಿ ಟೆಸ್ಟ್ ಸರಣಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಉಪನಾಯಕನ ಸ್ಥಾನವನ್ನು ರಹಾನೆಯಿಂದ ಕಿತ್ತುಕೊಳ್ಳಲಾಗಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ( World Test Championship Final) ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಅಜಿಂಕ್ಯ ರಹಾನೆ (Ajinkya Rahane) ಬಹಳ ದಿನಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. 17 ತಿಂಗಳ ನಂತರ ರಹಾನೆ ರಾಷ್ಟ್ರೀಯ ತಂಡದ ಜೆರ್ಸಿ ಧರಿಸಲಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಪ್ರಸಕ್ತ ಐಪಿಎಲ್‌ನಲ್ಲಿ (IPL 2023) ರಹಾನೆ ಅದ್ಭುತ ಫಾರ್ಮ್ನಲ್ಲಿರುವ ರಹಾನೆಗೆ ಒಂದರ್ಥದಲ್ಲಿ ಐಪಿಎಲ್ ಮರುಜನ್ಮ ನೀಡಿದೆ ಎಂತಲೇ ಹೇಳಬಹುದು. ಆದರೆ ರಹಾನೆ ಆಯ್ಕೆಯ ಬಗ್ಗೆ ಹಲವು ಕ್ರಿಕೆಟ್ ಪಂಡಿತರು ಮೂಗು ಮುರಿಯುತ್ತಿದ್ದ ದೇಶಿ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸರ್ಫ್ರಾಜ್ ಖಾನ್ ಅವರಂತಹ ಆಟಗಾರರ ಬಗ್ಗೆ ಆಯ್ಕೆಗಾರರು ಯೋಚಿಸದೆ ಕೇವಲ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ರಹಾನೆಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಹೊರಿಸಿತುತ್ತಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರಹಾನೆ ಆಡುತ್ತಿದ್ದು, ರಾಷ್ಟ್ರೀಯ ತಂಡಕ್ಕೆ ರಹಾನೆ ಆಯ್ಕೆಯ ಹಿಂದೆ ಧೋನಿ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಿವಿಧ ವರದಿಗಳ ಪ್ರಕಾರ, ಧೋನಿ ಗ್ರೀನ್ ಸಿಗ್ನಲ್ ನೀಡಿದ ನಂತರವೇ ಆಯ್ಕೆ ಮಂಡಳಿ ರಹಾನೆ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
5 ಪಂದ್ಯಗಳಲ್ಲಿ 209 ರನ್
ಕಳೆದ ಸಿಸನ್ನ ರಣಜಿ ಟ್ರೋಫಿಯಲ್ಲಿ ರಹಾನೆ 7 ಪಂದ್ಯಗಳಲ್ಲಿ ಒಟ್ಟು 634 ರನ್ ಬಾರಿಸಿದ್ದರು. ಐಪಿಎಲ್‌ನಲ್ಲೂ ಆ ಫಾರ್ಮ್ ಕಾಯ್ದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಸುಮಾರು 200 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿರುವ ರಹಾನೆ 209 ರನ್ ಬಾರಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಹೀಗಾಗಿ ಐಪಿಎಲ್‌ನಲ್ಲಿ ರಹಾನೆ ಆಟವನ್ನು ನೋಡಿದ ಆಯ್ಕೆ ಮಂಡಳಿ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಂಡದಲ್ಲಿ ಆಯ್ಕೆ ಮಾಡಿದ್ದರು. ಇದೀಗ ರಹಾನೆ ಆಯ್ಕೆಯ ಹಿಂದೆ ಧೋನಿ ನೀಡಿದ ರಿಪೋರ್ಟ್ ಇದೆ ಎಂದು ಹೇಳಲಾಗುತ್ತಿದ್ದು, ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಡಬ್ಲ್ಯುಟಿಸಿ ಫೈನಲ್‌ಗೆ ತಂಡವನ್ನು ಪ್ರಕಟಿಸುವ ಮೊದಲು ಮಂಡಳಿಯು ರಹಾನೆ ಅವರ ಫಾರ್ಮ್ ಬಗ್ಗೆ ಧೋನಿಯ ಬಳಿ ಚರ್ಚೆ ನಡೆಸಲಾಗಿದೆ. ಆ ಬಳಿಕ ಧೋನಿಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರವೇ ಮಂಡಳಿಯ ಆಯ್ಕೆ ಸಮಿತಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ರಹಾನೆಯನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂಬುದು ವರದಿಯಾಗಿದೆ.
IPL 2023: ಔಟಾಗಿದ್ದಕ್ಕೆ ಬ್ಯಾಟ್ ಮೇಲೆ ಕೋಪ ತೋರಿದ ಜೇಸನ್ ರಾಯ್ಗೆ ದಂಡದ ಬರೆ..!
ದೇಶೀಯ ಕ್ರಿಕೆಟ್ನಲ್ಲಿ ರನ್ ಮಳೆ
ರಹಾನೆ ಕೊನೆಯ ಬಾರಿಗೆ 2022 ರಲ್ಲಿ ಟೆಸ್ಟ್ ಸರಣಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಉಪನಾಯಕನ ಸ್ಥಾನವನ್ನು ರಹಾನೆಯಿಂದ ಕಿತ್ತುಕೊಳ್ಳಲಾಗಿತ್ತು. ನಂತರ 2022 ರಲ್ಲಿ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಅವರನ್ನು ಕೈಬಿಡಲಾಯಿತು. ಕಳೆದ ವರ್ಷಾಂತ್ಯದಲ್ಲಿ ಅವರಿಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಆ ಬಳಿಕ ಮುಂಬೈ ಪರ ದೇಶೀಯ ಕ್ರಿಕೆಟ್ನಲ್ಲಿ ರನ್ ಮಳೆ ಹರಿಸಿದ್ದ ರಹಾನೆ ಐಪಿಎಲ್‌ನಲ್ಲೂ ಅಬ್ಬರಿಸುತ್ತಿದ್ದಾರೆ. ಸದ್ಯ ರಾಷ್ಟ್ರೀಯ ತಂಡದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ರಹಾನೆ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Thu, 27 April 23