IPL 2023: ಔಟಾಗಿದ್ದಕ್ಕೆ ಬ್ಯಾಟ್ ಮೇಲೆ ಕೋಪ ತೋರಿದ ಜೇಸನ್ ರಾಯ್​ಗೆ ದಂಡದ ಬರೆ..!

IPL 2023: ತಮ್ಮ ಬ್ಯಾಟ್ ಅನ್ನು ಗಾಳಿಯಲ್ಲಿ ಎಸೆಯುವ ಮೂಲಕ ತಮ್ಮ ಕೋಪವನ್ನು ತೋರಿಸಿದ್ದ ಜೇಸನ್ ರಾಯ್ ಅವರ ವರ್ತನೆಯೂ ಟೀಕೆಗೆ ಗುರಿಯಾಗಿತ್ತು.

IPL 2023: ಔಟಾಗಿದ್ದಕ್ಕೆ ಬ್ಯಾಟ್ ಮೇಲೆ ಕೋಪ ತೋರಿದ ಜೇಸನ್ ರಾಯ್​ಗೆ ದಂಡದ ಬರೆ..!
ಜೇಸನ್ ರಾಯ್
Follow us
ಪೃಥ್ವಿಶಂಕರ
|

Updated on:Apr 27, 2023 | 5:27 PM

ಐಪಿಎಲ್​ನಲ್ಲಿ (IPL 2023) 36ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Kolkata Knight Riders and Royal Challengers Bangalore) ನಡುವಿನ ಪಂದ್ಯ ರೋಚಕತೆಗೆ ಸಾಕ್ಷಿಯಾಯಿತು. ಆರ್​ಸಿಬಿ ತಂಡವನ್ನು 21 ರನ್‌ಗಳ ಮಣಿಸಿದ ಕೋಲ್ಕತ್ತಾ, ಈ ಸೀಸನ್​ನಲ್ಲಿ ಎರಡನೇ ಬಾರಿಗೆ ಬೆಂಗಳೂರು ತಂಡವನ್ನು ಸೋಲಿಸಿದ ಸಾಧನೆ ಮಾಡಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 200 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಜೇಸನ್ ರಾಯ್ (Jason Roy) ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿ 29 ಎಸೆತಗಳಲ್ಲಿ 56 ರನ್ ಗಳಿಸಿದರು. ಆದರೆ ಉತ್ತಮ ಲಯದಲ್ಲಿ ಕಾಣುತ್ತಿದ್ದ ರಾಯ್ ವಿಕೆಟ್ ಕಳೆದುಕೊಂಡ ನಂತರ ತಮ್ಮ ಬ್ಯಾಟ್ ಅನ್ನು ಗಾಳಿಯಲ್ಲಿ ಎಸೆಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದೀಗ ಐಪಿಎಲ್​ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡ ರಾಯ್ ಅವರಿಗೆ ಮಂಡಳಿ 10 ಲಕ್ಷ ರೂಗಳ ದಂಡ ವಿಧಿಸಿದೆ.

ತಮ್ಮ ವಿಕೆಟ್ ಕಳೆದುಕೊಂಡ ನಂತರ ತಾಳ್ಮೆ ಕಳೆದುಕೊಂಡಿದ್ದ ರಾಯ್, ತಮ್ಮ ಬ್ಯಾಟನ್ನು ಮೇಲಕ್ಕೆಸೆದು ಆಕ್ರೋಶ ಹೊರ ಹಾಕಿದ್ದರು. ಕೋಲ್ಕತ್ತಾದ ಬ್ಯಾಟಿಂಗ್ ಇನ್ನಿಂಗ್ಸ್‌ನ 10ನೇ ಓವರ್‌ ಬೌಲ್ ಮಾಡಿದ ವೈಶಾಕ್ ವಿಜಯಕುಮಾರ್, ಓವರ್‌ನ ಕೊನೆಯ ಎಸೆತದಲ್ಲಿ ರಾಯ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರಿಂದ ಹತಾಶರಾದ ರಾಯ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

BCCI Central Contract: ‘ಎ’ ಗ್ರೇಡ್​ನಲ್ಲಿ ಮೂವರಿಗೆ ಅವಕಾಶ; ಜಾರಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್

ಸತತ 3 ಸಿಕ್ಸರ್‌ಗಳು

ಇದಕ್ಕೂ ಮೊದಲು ಶಹಬಾಜ್ ಅಹ್ಮದ್ ಅವರ ಓವರ್‌ನಲ್ಲಿ ರಾಯ್ ಸತತ 3 ಸಿಕ್ಸರ್‌ಗಳು ಸೇರಿದಂತೆ ಒಂದೇ ಓವರ್​​ನಲ್ಲಿ ಒಟ್ಟು 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದ ರಾಯ್​ ಅವರನ್ನು ವಿಜಯ್‌ಕುಮಾರ್ ಬೌಲ್ಡ್ ಮಾಡಿದ್ದರು. ಔಟಾದ ಬಳಿಕ ಪೆವಿಲಿಯನ್‌ಗೆ ಮರಳುವ ಸಂದರ್ಭದಲ್ಲಿ ರಾಯ್ ಬ್ಯಾಟನ್ನು ಮೇಲಕ್ಕೇಸೆದು ಕೋಪ ಹೊರಹಾಕಿದ್ದರು.

ತಮ್ಮ ಬ್ಯಾಟ್ ಅನ್ನು ಗಾಳಿಯಲ್ಲಿ ಎಸೆಯುವ ಮೂಲಕ ತಮ್ಮ ಕೋಪವನ್ನು ತೋರಿಸಿದ್ದ ಜೇಸನ್ ರಾಯ್ ಅವರ ವರ್ತನೆಯೂ ಟೀಕೆಗೆ ಗುರಿಯಾಗಿತ್ತು. ಇದೀಗ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಯ್ ತಪ್ಪಿತಸ್ಥರೆಂದು ಕಂಡುಬಂದಿದ್ದು, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದಕ್ಕಾಗಿ ರಾಯ್‌ಗೆ ಪಂದ್ಯದ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಲಾಗಿದೆ.

21 ರನ್‌ಗಳಿಂದ ಸೋತ ಆರ್‌ಸಿಬಿ

ತವರಿನಲ್ಲಿ 201 ರನ್‌ಗಳ ಗುರಿ ಪಡೆದ ಬೆಂಗಳೂರು ಪರ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದರು. ಆದರೆ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Thu, 27 April 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ