IPL 2023 RCB vs KKR Highlights: ಕೆಕೆಆರ್ ವಿರುದ್ಧ ಮತ್ತೆ ಎಡವಿದ ಆರ್ಸಿಬಿಗೆ 22 ರನ್ ಸೋಲು
Royal Challengers Bangalore vs Kolkata Knight Riders IPL 2023 Highlights in Kannada: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕೊನೆಗೂ ಗೆಲುವಿನ ರುಚಿ ಕಂಡಿದೆ. ನಿತೀಶ್ ರಾಣಾ ನಾಯಕತ್ವದ ಕೆಕೆಆರ್ ಈ ಸೀಸನ್ನಲ್ಲಿ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು.
ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕೊನೆಗೂ ಗೆಲುವಿನ ರುಚಿ ಕಂಡಿದೆ. ನಿತೀಶ್ ರಾಣಾ ನಾಯಕತ್ವದ ಕೆಕೆಆರ್ ಈ ಸೀಸನ್ನಲ್ಲಿ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಜೇಸನ್ ರಾಯ್ ಮತ್ತು ನಿತೀಶ್ ಅವರ ಸ್ಫೋಟಕ ಇನ್ನಿಂಗ್ಸ್‌ನ ನಂತರ, ಸುಯಶ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಅವರ ಸ್ಪಿನ್ ಆಧಾರದ ಮೇಲೆ ಕೆಕೆಆರ್ 21 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಬೆಂಗಳೂರು ಸತತ ಎರಡು ಗೆಲುವಿನ ನಂತರ ಸೋಲಿನತ್ತ ಮುಖಮಾಡಿದೆ.
LIVE NEWS & UPDATES
-
ಕೋಲ್ಕತ್ತಾಗೆ ಮೂರನೇ ಗೆಲುವು
ಕೋಲ್ಕತ್ತಾ ನೀಡಿದ 201 ರನ್‌ಗಳ ಗುರಿಯನ್ನು ಬೆಂಗಳೂರು ತಂಡ 20 ಓವರ್‌ಗಳಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು 8 ವಿಕೆಟ್‌ಗೆ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಪಂದ್ಯವನ್ನು 21 ರನ್‌ಗಳಿಂದ ಕಳೆದುಕೊಂಡಿತು. ಇದು ಬೆಂಗಳೂರಿಗೆ ನಾಲ್ಕನೇ ಸೋಲಾದರೆ, ಕೋಲ್ಕತ್ತಾಗೆ ಮೂರನೇ ಗೆಲುವು
-
ವಿಜಯ್‌ಕುಮಾರ್ ಸಿಕ್ಸರ್
ವಿಜಯ್ ಕುಮಾರ್ 19ನೇ ಓವರ್ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.ವಿಜಯ್ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಬೆಂಗಳೂರಿಗೆ ಗುರಿ ಮುಟ್ಟುವುದು ಕಷ್ಟವಾಗಿರುವಾಗ ಈ ನಡುವೆ ಈ ಸಿಕ್ಸ್ ಬಂದಿದೆ
-
ಕಾರ್ತಿಕ್ ಔಟ್
ವರುಣ್ ಬೌಲಿಂಗ್ನಲ್ಲಿ ಕಾರ್ತಿಕ್ ಕ್ಯಾಚಿತ್ತು ಔಟಾದರು. 18ನೇ ಓವರ್ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಕಾರ್ತಿಕ್ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚಿತ್ತು ಔಟಾದರು.
ಹಸರಂಗ ಔಟ್
17ನೇ ಓವರ್ನ 5ನೇ ಎಸೆತದಲ್ಲಿ ಹಸರಂಗ ಡೀಪ್ನಲ್ಲಿ ಕ್ಯಾಚಿತ್ತು ಔಟಾದರು.
150 ರನ್ ಪೂರ್ಣ
ರಸೆಲ್ ಓವರ್ನಲ್ಲಿ ಸಿಕ್ಸರ್ ಬಾರಿಸಿದ ಕಾರ್ತಿಕ್, ಆರ್‌ಸಿಬಿ ಮೊತ್ತವನ್ನು 150ರ ಗಡಿ ದಾಟಿಸಿದರು.
15 ಓವರ್ ಮುಕ್ತಾಯ
ಕೊಹ್ಲಿ ವಿಕೆಟ್ ಬಳಿಕ ಬಂದ ಸುಯೇಶ್ ರಸೆಲ್ ಓವರ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ಆ ಬಳಿಕ ಅಂದರೆ 14ನೇ ಓವರ್ನಲ್ಲಿ ಕಾರ್ತಿಕ್ 1 ಬೌಂಡರಿ ಹೊಡೆದರು. ಇನ್ನುಳಿದಂತೆ 15ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ
ಅರ್ಧಶತಕ ಬಾರಿಸಿದ ಕೊಹ್ಲಿ ಔಟ್
ರಸೆಲ್ ಓವರ್ನಲ್ಲಿ ಕೊಹ್ಲಿ, ಅಯ್ಯರ್ಗೆ ಕ್ಯಾಚಿತ್ತು ಔಟಾದರು. ಇದರೊಂದಿಗೆ ಆರ್‌ಸಿಬಿ 5ನೇ ವಿಕೆಟ್ ಕಳೆದುಕೊಂಡಿದೆ.
ಮಹಿಪಾಲ್ ಔಟ್
18 ಎಸೆತದಲ್ಲಿ 34 ರನ್ ಬಾರಿಸಿದ್ದ ಮಹಿಪಾಲ್ ವರುಣ್ ಬೌಲ್ ಮಾಡಿದ 12ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, ಅದರ ನಂತರದ ಎಸೆತದಲ್ಲೇ ಕ್ಯಾಚಿತ್ತು ಔಟಾದರು.
ಕೊಹ್ಲಿ ಅರ್ಧಶತಕ
ಸುಯೆಶ್ ಬೌಲ್ ಮಾಡಿದ 11ನೇ ಓವರ್ನಲ್ಲಿ ಬೌಂಡರಿ ಬಾರಿಸಿದ ಕೊಹ್ಲಿ ಆರ್ಸಿಬಿಯನ್ನು 100ರ ಗಡಿ ದಾಟಿಸಿದರು. ಆ ಬಳಿಕ ಸಿಂಗಲ್ ಕದ್ದು ತಮ್ಮ ಅರ್ಧಶತಕವನ್ನು ಪೂರೈಸಿದರು.
ಮಹಿಪಾಲ್ ಸಿಕ್ಸ್
10ನೇ ಓವರ್ ಬೌಲ್ ಮಾಡಿದ ನರೈನ್ ಓವರ್ನ ಮೊದಲ ಎಸೆತದಲ್ಲೇ ಮಹಿಪಾಲ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಹಾಗೆಯೇ ಕೊನೆಯ ಎಸೆತದಲ್ಲೂ ಸಿಕ್ಸರ್ ಬಂತು
ಮಹಿಪಾಲ್ ಬೌಂಡರಿ
ಮ್ಯಾಕ್ಸಿ ವಿಕೆಟ್ ಬಳಿಕ ಬಂದ 2 ಓವರ್‌ಗಳಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ 9ನೇ ಓವರ್ನಲ್ಲಿ ಮಹಿಪಾಲ್, ರಾಣಾ ಮೇಲೆ ಬೌಂಡರಿ ಹೊಡೆದರು.
ಮ್ಯಾಕ್ಸ್‌ವೆಲ್ ಔಟ್
ಪವರ್ ಪ್ಲೇ ಕೊನೆಯ ಓವರ್ನಲ್ಲಿ ಮ್ಯಾಕ್ಸ್‌ವೆಲ್ ಕೂಡ ಔಟಾದರು. ವರುಣ್ ಓವರ್ನಲ್ಲಿ 1 ಬೌಂಡರಿ ಹೊಡೆದ ಮ್ಯಾಕ್ಸಿ, ಆ ಬಳಿಕ ಮಿಡ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ಶಹಬಾಜ್ ಮತ್ತೆ ವಿಫಲ
5ನೇ ಓವರ್ ಬೌಲ್ ಮಾಡಲು ಬಂದ ಸುಯೆಶ್ ಇನ್ನೊಂದು ವಿಕೆಟ್ ಉರುಳಿಸಿದ್ದಾರೆ. ಇಡೀ ಟೂರ್ನಿಯಲ್ಲಿ ರನ್‌ಗಳ ಬರ ಎದುರಿಸುತ್ತಿರುವ ಶಹಬಾಜ್ ಎಲ್ಬಿ ಬಲೆಗೆ ಬಿದ್ದರು.
ಕೊಹ್ಲಿ ಫೋರ್
ವರುಣ್ ಬೌಲ್ ಮಾಡಿದ 4ನೇ ಓವರ್ನ ಮೊದಲ ಎಸೆತದಲ್ಲೇ ಸ್ಕ್ವೈರ್ ಲೆಗ್ ಮೇಲೆ ಕೊಹ್ಲಿ ಬೌಂಡರಿ ಹೊಡೆದರು.
ಫಾಫ್ ಔಟ್
ಸುಯೆಶ್ 3ನೇ ಓವರ್ನ 2ನೇ ಎಸೆತದಲ್ಲಿ ಆರ್‌ಸಿಬಿ ಆರಂಭಿಕ ಫಾಫ್ ಡು ಪ್ಲೆಸಿಸ್ ವಿಕೆಟ್ ಉರುಳಿಸಿದರು.
ಫಾಫ್ ಸಿಕ್ಸರ್
2ನೇ ಓವರ್ನ ಮೊದಲ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರೆ, ಆ ಬಳಿಕ 5 ಮತ್ತು 6ನೇ ಎಸೆತದಲ್ಲಿ ಫಾಫ್ ಭರ್ಜರಿ ಸಿಕ್ಸರ್ ಹೊಡೆದರು.
ಆರ್‌ಸಿಬಿ ಬ್ಯಾಟಿಂಗ್ ಆರಂಭ
ಅರೋರಾ ಬೌಲ್ ಮಾಡಿದ ಮೊದಲ ಓವರ್ನ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಕೊಹ್ಲಿ, 5ನೇ ಎಸೆತದಲ್ಲೂ ಮತ್ತೊಂದು ಬೌಂಡರಿ ಹೊಡೆದರು.
201 ರನ್ ಟಾರ್ಗೆಟ್
20 ನೇ ಓವರ್ನಲ್ಲಿ 15 ರನ್ ಬಂದವು. ಈ ಓವರ್ನಲ್ಲಿ ವೀಸಾ 1 ಸಿಕ್ಸರ್ ಹೊಡೆದರೆ, ಅಂತಿಮ ಎಸೆತದಲ್ಲಿ ರಿಂಕು ಕೂಡ ಸಿಕ್ಸರ್ ಬಾರಿಸಿದರು. ಇದರೊಂದಿಗೆ ಕೆಕೆಆರ್ 201 ರನ್‌ಗಳ ಟಾರ್ಗೆಟ್ ಸೆಟ್ ಮಾಡಿದೆ.
ರಸೆಲ್ ಔಟ್
19ನೇ ಓವರ್ನ ಕೊನೆಯ ಎಸೆತದಲ್ಲಿ ಸಿರಾಜ್, ರಸೆಲ್ ವಿಕೆಟ್ ಉರುಳಿಸಿದರು.
ರಿಂಕು ಸ್ಫೋಟ
19ನೇ ಓವರ್ ಬೌಲ್ ಮಾಡಿದ ಸಿರಾಜ್ ತುಂಬಾ ದುಬಾರಿಯಾದರು. ಈ ಓವರ್ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ರಿಂಕು, ಆ ನಂತರ ಎರಡು ಎಸೆತಗಳನ್ನು ಬೌಂಡರಿ ಬಾರಿಸಿದರು.
ಅಯ್ಯರ್ ಕೂಡ ಔಟ್
ಹಸರಂಗ ಬೌಲ್ ಮಾಡಿದ ಅದೇ ಓವರ್ನಲ್ಲಿ ಅಯ್ಯರ್ ಕೂಡ ವಿಕೆಟ್ ಒಪ್ಪಿಸಿದ್ದಾರೆ.
ರಾಣಾ ಔಟ್
48 ರನ್ ಬಾರಿಸಿದ ರಾಣಾ 18ನೇ ಓವರ್ನ ಮೊದಲ ಎಸೆತದಲ್ಲೇ ಔಟಾಗಿದ್ದಾರೆ. ಹಸರಂಗ ಎಸೆದ ಮೊದಲ ಎಸೆತವನ್ನು ರಾಣಾ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಆಡಿದರು. ಆದರೆ ಅಲ್ಲೆ ನಿಂತಿದ್ದ ವೈಶಾಕ್ ಅದ್ಭುತ ಕ್ಯಾಚ್ ಪಡೆದರು.
17ನೇ ಓವರ್ನಲ್ಲಿ 17 ರನ್,
ವೈಶಾಕ್ ಬೌಲ್ ಮಾಡಿದ 17ನೇ ಓವರ್ನ ಕೊನೆಯ 3 ಎಸೆತಗಳು ಬೌಂಡರಿ ಸೇರಿದವು. 4 ಮತ್ತು 5ನೇ ಎಸೆತವನ್ನು ರಾಣಾ ಬೌಂಡರಿಗಟ್ಟಿದರೆ, 6ನೇ ಎಸೆತದಲ್ಲಿ ಸಿಕ್ಸರ್ ಹೊಡೆದರು.
ಹರ್ಷಲ್ ದುಬಾರಿ
16ನೇ ಓವರ್ ಬೌಲ್ ಮಾಡಿದ ಹರ್ಷಲ್ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ ರಾಣಾ 2 ಸಿಕ್ಸರ್ ಹೊಡೆದರೆ, ಅಯ್ಯರ್ 1 ಬೌಂಡರಿ ಹೊಡೆದರು.
15 ಓವರ್ ಮುಕ್ತಾಯ
15ನೇ ಓವರ್ನಕಲ್ಲಿ ಸಿರಾಜ್ ಕೇವಲ 5 ರನ್ ನೀಡಿದರು. ಕೆಕೆಆರ್ ಪರ ರಾಣಾ 20, ಅಯ್ಯರ್ 23 ರನ್ ಬಾರಿಸಿ ಆಡುತ್ತಿದ್ದಾರೆ. 15 ಓವರ್ ಅಂತ್ಯಕ್ಕೆ 131/2
ವೈಶಾಕ್ಗೆ ಸಿಕ್ಸರ್
14ನೇ ಓವರ್ನ ಕೊನೆಯ ಎಸೆತದಲ್ಲಿ ನಾಯಕ ರಾಣಾ ಬೌಲರ್ನ ತಲೆಯ ಮೇಲೆ ನೇರ ಸಿಕ್ಸರ್ ಬಾರಿಸಿದರು.
Karnataka Election Live: ಶೆಟ್ಟರ್ಗೆ ಜೀವನದಲ್ಲಿ ಮರೆಯಲಾಗದ ಸೋಲು; ಬಿಎಸ್ ಯಡಿಯೂರಪ್ಪ
ಪಕ್ಷದ ಬೆನ್ನಿಗೆ ಚೂರಿ ಹಾಕಿರುವ ಜಗದೀಶ ಶೆಟ್ಟರ್ಗೆ ಜೀವನದಲ್ಲೇ ಮರೆಯಲಾಗದ ಸೋಲು ಕಾದಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿ, ಅಥಣಿ, ಕುಡಚಿ ಪ್ರವಾಸ ಮುಗಿಸಿ ಬಂದಿದ್ದೇನೆ. ನಾಳೆ ಕಲಬುರಗಿ ಕಡೆ ಪ್ರವಾಸ ಹೊರಟಿದ್ದೇನೆ. ನಿನ್ನೆ ವೀರಶೈವ ಮುಖಂಡರ ಸಭೆ ಮಾಡಿದ್ದೆ. ಆ ಸಭೆಯಲ್ಲಿ ಜಗದೀಶ್ ಶೆಟ್ಟರ್ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.
ಶತಕ ಪೂರ್ಣ
ಹಸರಂಗ ಬೌಲ್ ಮಾಡಿದ 12ನೇ ಓವರ್ನಲ್ಲಿ 2ಬೌಂಡರಿ ಬಂದವು. ಇದರೊಂದಿಗೆ ಕೆಕೆಆರ್ ಸ್ಕೋರ್ 100ರ ಗಡಿ ದಾಟಿದೆ.
ವೈಶಾಕ್ಗೆ 2ನೇ ವಿಕೆಟ್
10ನೇ ಓವರ್ನ 2ನೇ ಎಸೆತದಲ್ಲಿ ಜಗದೀಸನ್ ವಿಕೆಟ್ ಉರುಳಿಸಿದ್ದ ವೈಶಾಕ್ ಕೊನೆಯ ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದ ರಾಯ್ ವಿಕೆಟ್ ಪಡೆದರು.
ಜಗದೀಸನ್ ಔಟ್
29 ಎಸೆತಗಳಲ್ಲಿ 27 ರನ್ ಬಾರಿಸಿದ್ದ ಜಗದಿಸನ್ 10ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಕಡೆ ನಿಂತಿದ್ದ ವಿಲ್ಲಿಗೆ ಕ್ಯಾಚಿತ್ತು ಔಟಾದರು. ವೈಶಾಕ್ ಈ ವಿಕೆಟ್ ಉರುಳಿಸಿದರು.
ಹರ್ಷಲ್ಗೆ ಬೌಂಡರಿ
ಹರ್ಷಲ್ ಬೌಲ್ ಮಾಡಿದ 9ನೇ ಓವರ್ನ 3ನೇ ಎಸೆತದಲ್ಲಿ ಜಗದೀಸನ್ ವೈಡ್ ಥರ್ಡ್ಮ್ಯಾನ್ ಕಡೆ ಬೌಂಡರಿ ಹೊಡೆದರು.
ರಾಯ್ ಅರ್ಧಶತಕ
ಆರಂಭದಿಂದಲೂ ಅಬ್ಬರಿಸುತ್ತಿರುವ ರಾಯ್ ಕೇವಲ 22 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಒಂದೇ ಓವರ್ನಲ್ಲಿ 4 ಸಿಕ್ಸರ್
ಶಹಬಾಜ್ ಬೌಲ್ ಮಾಡಿದ ಪವರ್ ಪ್ಲೇ ಕೊನೆಯ ಓವರ್ನಲ್ಲಿ ರಾಯ್ ಬರೋಬ್ಬರಿ 4 ಸಿಕ್ಸರ್ ಬಾರಿಸಿದರು. ಇದರೊಂದಿಗೆ ಕೆಕೆಆರ್ ಅರ್ಧಶತಕ ಕೂಡ ಪೂರ್ಣಗೊಂಡಿದೆ.
5 ಓವರ್ ಮುಕ್ತಾಯ
ಹಸರಂಗ ಬೌಲ್ ಮಾಡಿದ 5ನೇ ಓವರ್ನ ಕೊನೆಯ ಎಸೆತದಲ್ಲಿ ರಾಯ್ ಬೌಂಡರಿ ಹೊಡೆದರು. ಈ ಓವರ್ನಲ್ಲಿ ಆರ್‌ಸಿಬಿ ರಿವ್ಯೂ ತೆಗೆದುಕೊಂಡಿತ್ತಾದರೂ ಯಶಸ್ವಿಯಾಗಲಿಲ್ಲ.
ವಿಲ್ಲಿ ದುಬಾರಿ, ಕೆಕೆಆರ್ 35/0
4ನೇ ಓವರ್ನಲ್ಲಿ ವಿಲ್ಲಿ ಕೊಂಚ ದುಬಾರಿಯಾದರು. ಈ ಓವರ್ನಲ್ಲಿ ಜಗದೀಸನ್ 2 ಬೌಂಡರಿ ಹೊಡೆದರೆ, ರಾಯ್ 1 ಸಿಕ್ಸರ್ ಬಾರಿಸಿದರು.
ರಾಯ್ 3ನೇ ಬೌಂಡರಿ
ಸಿರಾಜ್ ಬೌಲ್ ಮಾಡಿದ 3ನೇ ಓವರ್ನ 4ನೇ ಎಸೆತದಲ್ಲಿ ರಾಯ್ ಕವರ್ಸ್ ದಿಕ್ಕಿನ ಕಡೆಗೆ ಬೌಂಡರಿ ಬಾರಿಸಿದರು.
ಜಗದೀಸನ್ ಬೌಂಡರಿ
ವಿಲ್ಲಿ ಬೌಲ್ ಮಾಡಿದ 2ನೇ ಓವರ್ನ 2ನೇ ಎಸೆತವನ್ನು ಜಗದೀಸನ್ ಶಾರ್ಟ್ ಥರ್ಡ್ಮ್ಯಾನ್ ಕಡೆ ಬೌಂಡರಿಗಟ್ಟಿದರು.
ಮೊದಲ ಓವರ್ನಲ್ಲೇ 2 ಬೌಂಡರಿ
ಕೆಕೆಆರ್ ಪರ ಜಗದೀಸನ್ ಹಾಗೂ ರಾಯ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್ನಲ್ಲಿ ರಾಯ್ 2 ಬೌಂಡರಿ ಬಾರಿಸಿದರು.
ಕೆಕೆಆರ್ ತಂಡ
ನಿತೀಶ್ ರಾಣಾ (ನಾಯಕ), ವೆಂಕಟೇಶ್ ಅಯ್ಯರ್, ನಾರಾಯಣ್ ಜಗದೀಶನ್, ಜೇಸನ್ ರಾಯ್, ಸುನಿಲ್ ನರೈನ್, ಆಂಡ್ರೆ ರಸೆಲ್, ರಿಂಕು ಸಿಂಗ್, ಡೇವಿಡ್ ವೀಸಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ ಮತ್ತು ವೈಭವ್ ಅರೋರಾ
ಆರ್‌ಸಿಬಿ ತಂಡ
ಫಾಫ್ ಡುಪ್ಲೆಸಿಸ್ ವಿರಾಟ್ ಕೊಹ್ಲಿ (ನಾಯಕ), ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಡೇವಿಡ್ ವಿಲ್ಲಿ, ವೈಶಾಕ್ ವಿಜಯಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಆರ್‌ಸಿಬಿ ತಂಡದಲ್ಲಿ ನಿರೀಕ್ಷೆಯಂತೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಎರಡನೇ ಬಾರಿಗೆ ಮುಖಾಮುಖಿ
ಈ ಸೀಸನ್ನಲ್ಲಿ ಎರಡನೇ ಬಾರಿಗೆ ಬೆಂಗಳೂರು ಮತ್ತು ಕೋಲ್ಕತ್ತಾ ನಡುವೆ ಹಣಾಹಣಿ ಇದೆ. ಕಳೆದ ಪಂದ್ಯದಲ್ಲಿ ಕೋಲ್ಕತ್ತಾ, ಆರ್‌ಸಿಬಿ ತಂಡವನ್ನು ಈಡನ್ ಗಾರ್ಡನ್‌ನಲ್ಲಿ ಏಕಪಕ್ಷೀಯವಾಗಿ 81 ರನ್‌ಗಳಿಂದ ಸೋಲಿಸಿತ್ತು. ಇದೀಗ ಆ ಸೋಲಿನ ಖಾತೆಯನ್ನು ತವರಿನಲ್ಲೇ ಇತ್ಯರ್ಥಪಡಿಸುವ ಅವಕಾಶ ಬೆಂಗಳೂರಿಗಿದೆ.
Published On - Apr 26,2023 6:33 PM