- Kannada News Photo gallery Cricket photos Virat Kohli in post-match presentation He said We did deserve to lose after RCB vs KKR IPL 2023 Match
Virat Kohli: ಪಂದ್ಯ ಮುಗಿದ ಬಳಿಕ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ: ಕೋಪದಲ್ಲಿ ಆಡಿದ ಮಾತುಗಳೇನು ನೋಡಿ
RCB vs KKR, IPL 2023: ಐಪಿಎಲ್ 2023 ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಆಟಗಾರರು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ.
Updated on: Apr 27, 2023 | 8:34 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಆರ್ಸಿಬಿ ಸೋತರೆ ಕೆಕೆಆರ್ 21 ರನ್ಗಳ ಜಯ ಸಾಧಿಸಿತು.

ಬೌಲಿಂಗ್ನಲ್ಲಿ ಆರ್ಸಿಬಿ ಬೌಲರ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರೆ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಮತ್ಯಾರು ಸಾಥ್ ನೀಡಲಿಲ್ಲ. ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಆಡಿದರೆ ಮಾತ್ರ ಆರ್ಸಿಬಿ ತಂಡಕ್ಕೆ ಜಯ, ಇಲ್ಲವಾದಲ್ಲಿ ಸೋಲು ಖಚಿತ ಎಂಬುದು ಮತ್ತೊಮ್ಮೆ ಸಾಭೀತಾಯಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಆಟಗಾರರು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ. ಪಂದ್ಯವನ್ನು ನಮ್ಮ ಕೈಯಾರೆ ನಾವು ಕಳೆದುಕೊಂಡೆವು ಎಂದು ಹೇಳಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಆಟವನ್ನು ಅವರಿಗೆ ಬಿಟ್ಟುಕೊಟ್ಟೆವು. ನಾವು ಸೋಲಲು ಅರ್ಹರಾಗಿದ್ದೇವೆ. ಅವರಿಗೆ ಜಯವನ್ನು ಹಸ್ತಾಂತರಿಸಿದ ರೀತಿಯಿತ್ತು. ಗುಣಮಟ್ಟದ ಆಟವನ್ನು ನಾವು ಆಡಲಿಲ್ಲ. ಪಂದ್ಯವನ್ನು ಗಮನಿಸಿದರೆ ಅನೇಕ ಅವಕಾಶಗಳಲ್ಲಿ ಕೈಚೆಲ್ಲಿದೆವು ಎಂದು ಕೊಹ್ಲಿ ಹೇಳಿದ್ದಾರೆ.

ನಾವು ಕೆಲವು ಕ್ಯಾಚ್ಗಳನ್ನು ಬಿಟ್ಟೆವು, ಇದರಿಂದ 25-30 ರನ್ ಹೆಚ್ಚು ಬಂದವು. ಅನಗತ್ಯ ಹೊಡೆತಗಳನ್ನು ಬಾರಿಸಿ ವಿಕೆಟ್ ಒಪ್ಪಿಸಿದೆವು. ಚೇಸಿಂಗ್ ಮಾಡುವಾಗ ವಿಕೆಟ್ ಕಳೆದುಕೊಂಡರೂ ಒಂದು ಜೊತೆಯಾಟ ಮುಖ್ಯವಾಗುತ್ತದೆ. ಆದರೆ, ಅದಿಂದು ಸಾಧ್ಯವಾಗಲಿಲ್ಲ- ವಿರಾಟ್ ಕೊಹ್ಲಿ.

ನಾವು ಒಂದು ಪಂದ್ಯ ಗೆಲ್ಲುತ್ತಿದ್ದೇವೆ ಮತ್ತೊಂದು ಪಂದ್ಯ ಸೋಲುತ್ತಿದ್ದೇವೆ. ಇದು ಒಳ್ಳೆಯ ವಿಷಯವಲ್ಲ. ನಾವು ರೇಸ್ನಲ್ಲಿ ಉಳಿಯಬೇಕಾದರೆ ಮುಂಬರುವ ಪಂದ್ಯಗಳಲ್ಲಿ ಜಯ ಸಾಧಿಸಬೇಕಿದೆ ಎಂದು ವಿರಾಟ್ ಕೊಹ್ಲಿ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ಜೇಸನ್ ರಾಯ್ ಅವರ 56 ರನ್, ನಾಯಕ ನಿತೀಶ್ ರಾಣ ಅವರ 48 ಹಾಗೂ ವೆಂಕಟೇಶ್ ಅಯ್ಯರ್ ಅವರ 31 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು. ಆರ್ಸಿಬಿ ಪರ ಹಸರಂಗ ಹಾಗೂ ವಿಜಯ್ಕುಮಾರ್ ತಲಾ 2 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರ್ ಗಳಿಸಿದಗ್ದು ಬಿಟ್ಟರೆ ಮಹಿಪಾಲ್ ಲುಮ್ರೂರ್ 34 ಹಾಗೂ ದಿನೇಶ್ ಕಾರ್ತಿಕ್ 22 ರನ್ ಗಳಿಸಿದರಷ್ಟೆ. ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೆ ಶಕ್ತವಾಯಿತು. ಕೆಕೆಆರ್ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರು.














