ವಿಷ್ಣುವರ್ಧನ್ ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?

Updated By: ಮದನ್​ ಕುಮಾರ್​

Updated on: Aug 13, 2025 | 9:47 PM

ವಿಷ್ಣುವರ್ಧನ್ ಸಮಾಧಿಗೆ ಸಂಬಂಧಿಸಿದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಷ್ಣು ಫ್ಯಾನ್ಸ್ ಬೇಡಿಕೆಗೆ ಬಾಲಕೃಷ್ಣ ಕುಟುಂಬ ಸ್ಪಂದಿಸುತ್ತಿಲ್ಲ ಎಂಬ ಮಾತಿದೆ. ಬಾಲಣ್ಣ ಅವರ ಮಗಳು ಗೀತಾ ಬಾಲಿ ಅವರು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಕುಟುಂಬದಲ್ಲಿಯೇ ಒಡಕು ಮೂಡಿದೆ.

ನಟ ವಿಷ್ಣುವರ್ಧನ್ ಅವರ ಸಮಾಧಿಗೆ (Vishnuvardhan Samadhi) ಸಂಬಂಧಿಸಿದ ವಿವಾದ ದಿನದಿನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ವಿಷ್ಣು ಅಭಿಮಾನಿಗಳ ಬೇಡಿಕೆಗೆ ಬಾಲಕೃಷ್ಣ ಅವರ ಕುಟುಂಬ ಸ್ಪಂದಿಸುತ್ತಿಲ್ಲ ಎಂಬ ಮಾತಿದೆ. ಬಾಲಣ್ಣ ಅವರ ಮಗಳು ಗೀತಾ ಬಾಲಿ (Geetha) ಅವರು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಕುಟುಂಬದಲ್ಲಿಯೇ ಒಡಕು ಮೂಡಿದೆ. ಅದನ್ನು ಬಗೆಹರಿಸಿಕೊಂಡು ವಿಷ್ಣುವರ್ಧನ್ (Vishnuvardhan) ಸ್ಮಾರಕ ಮರುನಿರ್ಮಾಣಕ್ಕೆ ತಾವು ಪ್ರಯತ್ನ ಮಾಡುವುದಾಗಿ ಗೀತಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.