ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!

Edited By:

Updated on: Sep 19, 2026 | 1:35 PM

ಬಳ್ಳಾರಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಎರಡು ತಿಂಗಳ ವೇತನ ವಿಳಂಬ ಮತ್ತು ಕಡಿಮೆ ಸಂಬಳದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೇವಲ 4,600 ರೂ. ವೇತನ ಪಡೆಯುವ ಇವರು, ಹೆಚ್ಚುವರಿ ಕೆಲಸಕ್ಕೆ ಯಾವುದೇ ಕೂಲಿ ಇಲ್ಲದೆ ಶೋಷಣೆಗೆ ಒಳಗಾಗಿದ್ದಾರೆ. ಕನಿಷ್ಠ 15,000 ರೂ. ವೇತನ ಮತ್ತು ಕೆಲಸ ಕಾಯಂ ಮಾಡುವಂತೆ ಆಗ್ರಹಿಸಿದ್ದಾರೆ.

ಬಳ್ಳಾರಿ, ಸೆಪ್ಟೆಂಬರ್ 19: ಬಳ್ಳಾರಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಎರಡು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದು, ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ತಿಂಗಳಿಗೆ 4,600 ರೂ. ಅಲ್ಪ ವೇತನ ಪಡೆಯುತ್ತಿರುವ ಇವರು, ಕಾಳು ಮತ್ತು ಮೊಟ್ಟೆ ಸುಲಿದಂತಹ ಹೆಚ್ಚುವರಿ ಕೆಲಸಕ್ಕೆ ಕಳೆದ ಎರಡು ವರ್ಷಗಳಿಂದ 500 ರೂ. ಕೂಲಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಾದ್ಯಂತ 4,500ಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತರಿದ್ದು, ಇವರಲ್ಲಿ ಬಹುತೇಕರು ವಿಧವೆಯರು, ವೃದ್ಧರು ಮತ್ತು ಅಂಗವಿಕಲರಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಅಡುಗೆ ಮಾಡುವುದರ ಜೊತೆಗೆ ಸ್ವಚ್ಛತೆ, ಡಿ-ದರ್ಜೆ ನೌಕರರ ಕೆಲಸವನ್ನೂ ಇವರಿಂದ ಮಾಡಿಸಲಾಗುತ್ತಿದೆ. ಕನಿಷ್ಠ 15,000 ರೂ. ವೇತನ ಮತ್ತು ಕೆಲಸ ಕಾಯಂ ಮಾಡಬೇಕು ಎಂದು ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಈ ಸಮಸ್ಯೆ ಬಳ್ಳಾರಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯಾದ್ಯಂತವೂ ಇದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವೇತನ ಸಮಸ್ಯೆ ಬಗೆಹರಿಸಬೇಕು ಹಾಗೂ ಹೆಚ್ಚುವರಿ ಕೆಲಸದ ಒತ್ತಡ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us