ಒಳ್ಳಾರಿ: ಒಂದೇ ಬೆಡ್​ ಮೇಲೆ ಮೂರು ಮಕ್ಕಳಿಗೆ ಚಿಕಿತ್ಸೆ, ತರಾಟೆಗೆ ತೆಗೆದುಕೊಂಡ ಮಕ್ಕಳ ಆಯೋಗ ಅಧಿಕಾರಿ ಶಶಿಧರ್ ಕೋಸಂಬೆ

ಒಳ್ಳಾರಿ: ಒಂದೇ ಬೆಡ್​ ಮೇಲೆ ಮೂರು ಮಕ್ಕಳಿಗೆ ಚಿಕಿತ್ಸೆ, ತರಾಟೆಗೆ ತೆಗೆದುಕೊಂಡ ಮಕ್ಕಳ ಆಯೋಗ ಅಧಿಕಾರಿ ಶಶಿಧರ್ ಕೋಸಂಬೆ

TV9 Web
| Updated By: ಆಯೇಷಾ ಬಾನು

Updated on: Sep 09, 2023 | 1:13 PM

ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಮುಂದೆ ವಿಮ್ಸ್ ಆಸ್ಪತ್ರೆ ಕರ್ಮಕಾಂಡ ಬಯಲಾಗಿದೆ. ಎನ್ಐಸಿಯು ಮಕ್ಕಳ ವಾರ್ಡ್​ನಲ್ಲಿ(ವಾರ್ಮರ್) ಒಂದೇ ಬೆಡ್ ಮೇಲೆ ಮೂರು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಿಯಮದ ಪ್ರಕಾರ ಒಂದು ಬೆಡ್ ಮೇಲೆ ಒಬ್ಬರಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಇಲ್ಲದೇ ಇದ್ರೇ ಒಂದು ಮಗುವಿ‌ನಿಂದ ಇನ್ನೊಂದು ಮಗುವಿಗೆ ಖಾಯಿಲೆ ಅಂಟುವ ಸಾಧ್ಯತೆ ಇರುತ್ತದೆ. ಆದರೆ ವಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೇ ನಾಮಕಾವಸ್ಥೆ ಚಿಕಿತ್ಸೆ ನೀಡಲಾಗ್ತಿದೆ.

ಬಳ್ಳಾರಿ, ಸೆ.09: ಸದಾ ಒಂದಲ್ಲೊಂದು ವಿವಾದ ಮೈ ಮೇಲೆ ಕಳೆದುಕೊಳ್ಳುವ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ. ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಮುಂದೆ ವಿಮ್ಸ್ ಆಸ್ಪತ್ರೆ ಕರ್ಮಕಾಂಡ ಬಯಲಾಗಿದೆ. ಎನ್ಐಸಿಯು ಮಕ್ಕಳ ವಾರ್ಡ್​ನಲ್ಲಿ(ವಾರ್ಮರ್) ಒಂದೇ ಬೆಡ್ ಮೇಲೆ ಮೂರು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಿಯಮದ ಪ್ರಕಾರ ಒಂದು ಬೆಡ್ ಮೇಲೆ ಒಬ್ಬರಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಇಲ್ಲದೇ ಇದ್ರೇ ಒಂದು ಮಗುವಿ‌ನಿಂದ ಇನ್ನೊಂದು ಮಗುವಿಗೆ ಖಾಯಿಲೆ ಅಂಟುವ ಸಾಧ್ಯತೆ ಇರುತ್ತದೆ. ಆದರೆ ವಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೇ ನಾಮಕಾವಸ್ಥೆ ಚಿಕಿತ್ಸೆ ನೀಡಲಾಗ್ತಿದೆ.

ಅರವತ್ತು ವಾರ್ಮರ್​ಗಳಿದ್ರೂ ಕೇವಲ ಮೂವತ್ತು ವಾರ್ಮರ್ ಬಳಕೆ ಮಾಡಲಾಗ್ತಿದೆ. ಹೀಗಾಗಿ ವಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಕಂಡು ಸಿಬ್ಬಂದಿಗೆ ಮಕ್ಕಳ ಆಯೋಗ ಅಧಿಕಾರಿ ಶಶಿಧರ್ ಕೋಸಂಬೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೇವಲ ಮಕ್ಕಳ ವಾರ್ಡ್ ಅಲ್ಲದೇ ಬಾಣಂತಿಯರ ವಾರ್ಡ್ ಕೂಡ ಅವ್ಯವಸ್ಥೆಯ ಅಗರವಾಗಿದೆ. ಈಗಾಗಲೇ ಎರಡು ಬಾರಿ ಭೇಟಿ ನೀಡಿದಾಗಲೂ ಸಿಬ್ಬಂದಿಗೆ ವಾರ್ನಿಂಗ್ ಮಾಡಲಾಗಿತ್ತು. ಇನ್ಮೂಂದೆ ಹೀಗೆ ಮಾಡಿದ್ರೇ ನೋಟಿಸ್ ನೀಡೋದಾಗಿ ಎಚ್ಚರಿಕೆ ನೀಡಿದ್ದಾರೆ.