ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಮಾಜಿ ಸಚಿವ ಶ್ರೀರಾಮುಲು ಬಳ್ಳಾರಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಗಲಭೆಯಲ್ಲಿ ಸಾವನ್ನಪ್ಪಿದ ರಾಜಶೇಖರ ಅವರ ಮೃತದೇಹವನ್ನು ಅವರ ಸಂಪ್ರದಾಯಕ್ಕೆ ವಿರುದ್ಧವಾಗಿ ಸುಡಲಾಗಿದೆ. ಸಾಕ್ಷಿ ನಾಶದ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂದು ಶ್ರೀರಾಮುಲು ಹೇಳಿದ್ದಾರೆ. ಪೊಲೀಸರು ಕುಟುಂಬಸ್ಥರ ಮೇಲೆ ಒತ್ತಡ ಹೇರಿ, ಮೃತದೇಹ ಮರುಪರಿಶೀಲನೆ ತಪ್ಪಿಸಲು ಇದನ್ನು ಮಾಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಬಳ್ಳಾರಿ, ಜನವರಿ 06: ಸಂಪ್ರದಾಯದ ಪ್ರಕಾರ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹವನ್ನು ಮಣ್ಣು ಮಾಡಬೇಕಿತ್ತು. ಆದರೆ ಸುಟ್ಟು ಹಾಕಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿ ಜನಾರ್ದನರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಶೇಖರ್ ಮೃತದೇಹವನ್ನ ಮಣ್ಣು ಮಾಡಬೇಕಿತ್ತು. ಸಾಕ್ಷಿ ನಾಶ ಮಾಡಬೇಕು ಅಂತ ವ್ಯವಸ್ಥಿತವಾಗಿ ಸುಟ್ಟು ಹಾಕಲಾಗಿದೆ. ಅವರ ಕುಟುಂಬಸ್ಥರನ್ನ ಪೊಲೀಸರು ಹೆದರಿಸಿ, ಬೆದರಿಸಿದ್ದಾರೆ. ಬಹಳಷ್ಟು ಬುಲೆಟ್ ಆತನ ದೇಹ ಹೊಕ್ಕಿದೆ. ಏಕೆ ಸುಟ್ಟು ಹಾಕಿದರು. ಇಂದಲ್ಲಾ ನಾಳೆ ಸತ್ಯ ಹೊರಗೆ ಬರುತ್ತೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
