‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು ಗರಂ

Updated on: Aug 12, 2026 | 7:13 PM

ರೈತರು ಪ್ರತಿಭಟನೆ ಮಾಡಿದಾಗ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸೂಕ್ತವಾಗಿ ಬೆಂಬಲ ನೀಡುವುದಿಲ್ಲ ಎಂಬ ಮಾತಿದೆ. ಈ ಬಗ್ಗೆ ಸಾರಾ ಗೋವಿಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಒಂದು ವೇಳೆ ಯಾರಾದರೂ ಹೋರಾಟಕ್ಕೆ ಬಾರದೇ ಇದ್ದರೆ ಅಂಥವರ ಸಿನಿಮಾ ನಿಷೇಧ ಮಾಡಿ. ಏನಾಗುತ್ತೆ ನೋಡೋಣ’ ಎಂದು ಗೋವಿಂದು ಹೇಳಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ತಿಕ್ಕಾಟ ನಡೆಯುತ್ತಿದೆ. ಸದ್ಯಕ್ಕೆ ಮಳೆ ಆಗಿರುವುದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ ಪ್ರತಿ ಬಾರಿ ನೀರಿನ ಸಲುವಾಗಿ ರೈತರು ಪ್ರತಿಭಟನೆ ಮಾಡಿದಾಗ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸೂಕ್ತವಾಗಿ ಬೆಂಬಲ ನೀಡುವುದಿಲ್ಲ ಎಂಬ ಮಾತಿದೆ. ಈ ಬಗ್ಗೆ ಸಾರಾ ಗೋವಿಂದು (Sa Ra Govindu) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬೆಂಬಲ ನೀಡುತ್ತೇವೆ ಎಂದು ವಾಣಿಜ್ಯ ಮಂಡಳಿ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ. ಅದು ಎಲ್ಲರ ಧ್ವನಿ. ನೈತಿಕತೆ ಇದ್ದರೆ ಎಲ್ಲ ಸ್ಟಾರ್ ನಟರು ಬರಬೇಕು. ಅವರಿಗೆ ಆಹ್ವಾನ ನೀಡೋಕೆ ಆಗಲ್ಲ. ಒಂದು ವೇಳೆ ಯಾರಾದರೂ ಹೋರಾಟಕ್ಕೆ ಬಾರದೇ ಇದ್ದರೆ ಅಂಥವರ ಸಿನಿಮಾ ನಿಷೇಧ ಮಾಡಿ. ಏನಾಗುತ್ತೆ ನೋಡೋಣ. ಆಗ ಅವರಿಗೆ ಬುದ್ಧಿ ಬರುತ್ತದೆ’ ಎಂದು ಸಾರಾ ಗೋವಿಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 12, 2026 06:36 PM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More