Untimely rains cause damage: ಭಾರಿ ಮಳೆ ಮತ್ತು ಬಿರುಗಾಳಿಯಿಂದ ಮೈಸೂರಲ್ಲಿ ಮತ್ತೊಬ್ಬ ರೈತನ ಬಾಳೆ ಬೆಳೆ ಹಾಳು
ಕೇವಲ ಮೈಸೂರು ಮಾತ್ರವಲ್ಲ, ರಾಜ್ಯದಲ್ಲಿ ತೊಂದರೆಗೀಡಾಗಿರುವ ಎಲ್ಲ ರೈತರ ಸಹಾಯಕ್ಕೆ ಸರ್ಕಾ ರ ಮುಂದಾಗಬೇಕು.
ಮೈಸೂರು: ನಮ್ಮ ದೇಶದ ಬಹತೇಕ ರೈತರ (farmers) ಬದುಕು ಮಳೆಯನ್ನು ಅವಲಂಬಿಸಿದೆ. ಆದರೆ ಅದೇ ಮಳೆ ಅವರ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿರೋದು ದುರಂತ. ಮೇನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮೈಸೂರು ಜಿಲ್ಲೆಯ ನಾನಾ ಭಾಗಗಳಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಂಜನಗೂಡು ತಾಲ್ಲೂಕಿನ ವಡ್ಡರಹುಂಡಿ ಗ್ರಾಮದ ರೈತರಾದ ಪುಟ್ಟಸ್ವಾಮಿ (Puttaswamy) ಮತ್ತು ರಾಣಿಯವರ (Rani) ಬಾಳೆ ಬೆಳೆ ಭಾಗಶಃ ನೆಲಕಚ್ಚಿದೆ. ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆ ಬಾಳೆ ತೋಟದಲ್ಲಿ ತಾಂಡವ ನೃತ್ಯ ನಡೆಸಿದೆ. ಮೈಸೂರಿನವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭಾಗದ ರೈತಾಪಿ ಜನರಿಗೆ ನೆರವಾಗಬೇಕು. ಕೇವಲ ಮೈಸೂರು ಮಾತ್ರವಲ್ಲ, ರಾಜ್ಯದಲ್ಲಿ ತೊಂದರೆಗೀಡಾಗಿರುವ ಎಲ್ಲ ರೈತರ ಸಹಾಯಕ್ಕೆ ಮುಂದಾಗಬೇಕು.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos