ಸಿದ್ದರಾಮಯ್ಯ ಸಿಎಂ ಆಗಲೆಂದು ನಂಜನಗೂಡು ಶ್ರೀಕಂಠೇಶ್ವರನ ಮೊರೆ ಹೋದ ಅಭಿಮಾನಿಗಳು; 101 ತೆಂಗಿನಕಾಯಿ ಈಡುಗಾಯಿ ಸೇವೆ
ಸಿದ್ದರಾಮಯ್ಯ ಸಿಎಂ ಆಗಲೆಂದು ಅಭಿಮಾನಿಗಳು ನಂಜನಗೂಡು ಶ್ರೀಕಂಠೇಶ್ವರನ ಮೊರೆ ಹೋಗಿದ್ದಾರೆ. ಜೊತೆಗೆ 101 ತೆಂಗಿನಕಾಯಿ ಈಡುಗಾಯಿ ಸೇವೆ ಸಲ್ಲಿಸಿದ್ದಾರೆ.
ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಫಲಿತಾಂಶ(Karnataka Assembly Elections 2023 Result)ಮೇ.13 ರಂದು ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದಿಂದ ಗೆದ್ದಬಂದಿದ್ದು, ಇದೀಗ ಆಡಳಿತ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ. ಆದರೆ, ಈ ಮಧ್ಯೆ ಸಿಎಂ ಗದ್ದುಗೆಗೆ ಡಿಕೆ ಶಿವಕುಮಾರ್(DK Shivakumar) ಹಾಗೂ ಸಿದ್ದರಾಮಯ್ಯ(Siddaramaiah) ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ. ಇನ್ನು ಈ ಹಿನ್ನಲೆ ಮೈಸೂರಿನಲ್ಲಿ ಸಿದ್ದು ಪರ ಅಭಿಮಾನಿಗಳು ನಂಜನಗೂಡು ಶ್ರೀಕಂಠೇಶ್ವರನ ಮೊರೆ ಹೋಗಿದ್ದಾರೆ. ಹೌದು 101 ತೆಂಗಿನಕಾಯಿ ಈಡುಗಾಯಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ವಿಶೇಷ ಸೇವೆ, ಈಡುಗಾಯಿ, ಸಿದ್ದರಾಮಯ್ಯ ಸಿಎಂ ಆಗಲೆಂದು ನಂಜುಂಡೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos