Video: ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ

Updated on: Aug 25, 2026 | 4:32 PM

ಬನಶಂಕರಿ ದೇವಾಲಯವು ಬಾಗಲಕೋಟೆಯ ಚೊಳಚಗುಡ್ಡದಲ್ಲಿದ್ದು, ಪಾರ್ವತಿಯ ಪ್ರತಿರೂಪವಾಗಿ ಬನಶಂಕರಿ ಹಾಗೂ ಬರಗಾಲದಲ್ಲಿ ಹಸಿವು ನೀಗಿಸಿದ ಶಾಕಂಬರಿ ಎಂದು ಹೆಸರುವಾಸಿಯಾಗಿದೆ. ಭಕ್ತರ ಸಂಕಷ್ಟಗಳನ್ನು ದೂರಮಾಡುವ ಈ ಶಕ್ತಿಪೀಠವು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಶ್ರೀ ಕ್ಷೇತ್ರ ಎಂಬ ಹಿರಿಮೆಯನ್ನು ಹೊಂದಿದೆ. ದುರ್ಗಮಾಸುರ ಎಂಬ ರಾಕ್ಷಸನಿಂದ ತೊಂದರೆಗೊಳಗಾದ ಋಷಿಮುನಿಗಳ ಪ್ರಾರ್ಥನೆಗೆ ಓಗೊಟ್ಟು, ಪಾರ್ವತಿಯು ಬನಶಂಕರಿ ರೂಪ ತಾಳಿ ರಾಕ್ಷಸನನ್ನು ಸಂಹಾರ ಮಾಡಿದಳು ಎಂದು ಪುರಾಣಗಳು ಹೇಳುತ್ತವೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡದಲ್ಲಿ ನೆಲೆಸಿರುವ ಶ್ರೀ ಬನಶಂಕರಿ ದೇವಾಲಯವು ಕೇವಲ ರಾಜ್ಯಕ್ಕೆ ಸೀಮಿತವಾಗದೆ, ದೇಶವಿದೇಶಗಳಿಂದಲೂ ಭಕ್ತರನ್ನು ಆಕರ್ಷಿಸುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ದೇವಾಲಯವು ತನ್ನ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಿಂದಾಗಿ ಅಪಾರ ಖ್ಯಾತಿಯನ್ನು ಗಳಿಸಿದೆ. ಬನಶಂಕರಿ ಎಂಬ ಹೆಸರು ಬನ (ಕಾಡು) ಮತ್ತು ಶಂಕರಿ (ಪಾರ್ವತಿ) ಪದಗಳಿಂದ ಬಂದಿದೆ. ಪಾರ್ವತಿಯು ಬನದಲ್ಲಿ ಪ್ರತ್ಯಕ್ಷಳಾದ ಕಾರಣ ಈ ಹೆಸರು ಬಂತು ಎಂಬ ಪ್ರತೀತಿಯಿದೆ. ದುರ್ಗಮಾಸುರ ಎಂಬ ರಾಕ್ಷಸನಿಂದ ತೊಂದರೆಗೊಳಗಾದ ಋಷಿಮುನಿಗಳ ಪ್ರಾರ್ಥನೆಗೆ ಓಗೊಟ್ಟು, ಪಾರ್ವತಿಯು ಬನಶಂಕರಿ ರೂಪ ತಾಳಿ ರಾಕ್ಷಸನನ್ನು ಸಂಹಾರ ಮಾಡಿದಳು ಎಂದು ಪುರಾಣಗಳು ಹೇಳುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Aug 25, 2026 04:31 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More