ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬೆಂಗಳೂರು-ಮೈಸೂರು ಎಕ್ಸಪ್ರೆಸ್ ವೇಯನ್ನು (Bengaluru-Mysore Expressway) ಉದ್ಘಾಟಿಸಲು ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮಕ್ಕೆ ಬರುವ ಎರಡೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಊಟಕ್ಕೆ ಪಲಾವ್, ಮೊಸರನ್ನ, ಗೋಧಿ ಪಾಯಸ, ಉಪ್ಪಿಟ್ಟು, ಕೇಸರಿ ಬಾತ್ ರುಚಿಕರವಾದ ಪದಾರ್ಥಗಳನ್ನು ಸಿದ್ದಪಡಿಸಲಾಗಿದೆ. ಸುಮಾರು 500 ಬಾಣಸಿಗರಿಂದ ಊಟ ತಯಾರಾಗಿದ್ದು, ಊಟ ಬಡಿಸಲು 600 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.