Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು

|

Updated on: Oct 19, 2024 | 6:52 PM

ಬೆಂಗಳೂರಿನಲ್ಲಿ ಶನಿವಾರ ಮತ್ತೆ ಭಾರಿ ಮಳೆಯಾಗಿದೆ. ಇನ್ನೇನು ಮೊಡ ಮರೆಯಾಯ್ತು, ಸೂರ್ಯ ಕಂಡ ಎಂದು ಬೆಂಗಳೂರಿಗರು ನಿಟ್ಟುಸಿರು ಬಿಡುವಷ್ಟರಲ್ಲಿ ವರುಣ ಮತ್ತೆ ಶಾಕ್ ಕೊಟ್ಟಿದ್ದಾನೆ. ಕಾರ್ಮೋಡ ಕವಿದು, ಮಧ್ಯಾಹ್ನವೇ ಭಾರಿ ಮಳೆ ಶುರುವಾಗಿದೆ. ಹಲವೆಡೆ ಮರಗಳು ರಸ್ತೆಗೆ ಉರುಳಿವೆ.

ಬೆಂಗಳೂರು, ಅಕ್ಟೋಬರ್ 19: ಎರಡು ದಿನ ಕೊಂಚ ಬಿಡುವು ಕೊಟ್ಟಿದ್ದ ಮಳೆ ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನ ಮತ್ತೆ ಸುರಿಯಿತು. ಬೆಂಗಳೂರಿನ ಟೌನ್​ಹಾಲ್, ರಿಚ್​ಮಂಡ್ ಟೌನ್​, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಸುತ್ತ ಮತ್ತೆ ಮಳೆ ಅಬ್ಬರಿಸಿತು. ಸಂಜೆ ವೇಳೆಗೆ ಪುನಃ ಸುರಿದ ಮಳೆ ಟೌನ್​ಹಾಲ್, ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಹನ ಸವಾರರು ಪರದಾಡುವಂತೆ ಮಾಡಿತು. ನಗರದ ಹಲವೆಡೆ ರಸ್ತೆಗೆ ಮರಗಳು ಉರುಳಿಬಿದ್ದು ಸಂಚಾರಕ್ಕೆ ಅಡಚಣೆಯಾಯಿತು.

ರಾಜಾಜಿನಗರದ ಶಿವನಹಳ್ಳಿ ಸಿಗ್ನಲ್‌ ಬಳಿ ರಸ್ತೆಗೆ ಅಡ್ಡಲಾಗಿ ಮರದ ರೆಂಬೆ ಕೊಂಬೆಗಳು ಬಿದ್ದಿದ್ದು, ಟ್ರಾಫಿಕ್ ಜಾಮ್ ಉಂಟಾಯಿತು. ಸದ್ಯ ಪಾಲಿಕೆ ಸಿಬ್ಬಂದಿ ತೆರವು ಕಾರ್ಯ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Oct 19, 2024 06:37 PM