AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ ಚಾಪ್ಟರ್​ 2’ ಸ್ವಾಗತಿಸಲು ರೆಡಿ ಆಯ್ತು ಊರ್ವಶಿ ಚಿತ್ರಮಂದಿರ

‘ಕೆಜಿಎಫ್​ ಚಾಪ್ಟರ್​ 2’ ಸ್ವಾಗತಿಸಲು ರೆಡಿ ಆಯ್ತು ಊರ್ವಶಿ ಚಿತ್ರಮಂದಿರ

TV9 Web
| Edited By: |

Updated on: Apr 13, 2022 | 9:49 PM

Share

ಊರ್ವಶಿ ಚಿತ್ರಮಂದಿರದ ಹೊರ ಭಾಗದಲ್ಲಿ ದೊಡ್ಡ ದೊಡ್ಡ ಪೋಸ್ಟರ್​ಗಳನ್ನು ಹಾಕಲಾಗಿದೆ. ಇದು ಸಿನಿಮಾ ಮೇಲಿರುವ ನಿರೀಕ್ಷೆ ಎಷ್ಟು ಎಂಬುದಕ್ಕೆ ಹಿಡಿದ ಕೈಗನ್ನಡಿ ಆಗಿದೆ.

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ತೆರೆಕಾಣುವ ಸಮಯ ಬಂದೇ ಬಿಟ್ಟಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ. ಚಿತ್ರವನ್ನು ಸ್ವಾಗತಿಸೋಕೆ ಕರ್ನಾಟಕದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಹಲವು ಚಿತ್ರಮಂದಿರಗಳ ಎದುರು ಯಶ್ ಅವರ ಕಟೌಟ್ (Yash Cutout) ನಿಲ್ಲಿಸಲಾಗಿದೆ. ಬೆಂಗಳೂರಿನ (Bangalore) ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾಗಿರುವ ಊರ್ವಶಿಯಲ್ಲಿ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರದ ಹೊರ ಭಾಗದಲ್ಲಿ ದೊಡ್ಡ ದೊಡ್ಡ ಪೋಸ್ಟರ್​ಗಳನ್ನು ಹಾಕಲಾಗಿದೆ. ಇದು ಸಿನಿಮಾ ಮೇಲಿರುವ ನಿರೀಕ್ಷೆ ಎಷ್ಟು ಎಂಬುದಕ್ಕೆ ಹಿಡಿದ ಕೈಗನ್ನಡಿ ಆಗಿದೆ.

ಇದನ್ನೂ ಓದಿ: ಪುಣೆಯಲ್ಲಿ ‘ಕೆಜಿಎಫ್​ 2’ ಟಿಕೆಟ್​ ಸಿಗದೇ ವಿಮಾನ ಹತ್ತಿ ಬೆಂಗಳೂರಿಗೆ ಬಂದ ಲೇಡಿ ಫ್ಯಾನ್ಸ್​​: ಆಹಾ ಅಭಿಮಾನ

‘ಕೆಜಿಎಫ್​ 2’ ಎಡಿಟರ್​ ವಯಸ್ಸು ಕೇವಲ 20 ವರ್ಷ; ಫ್ಯಾನ್​ ಮೇಡ್ ವಿಡಿಯೋ ಮಾಡಿದ್ದಕ್ಕೆ ಸಿಕ್ತು ಚಾನ್ಸ್