AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಶಕಗಳಿಂದ ವರ್ಕ್​ ಆರ್ಡರ್ ಇಲ್ಲದೆ ಕಾಮಗಾರಿಗಳು ನಡೆಯುತ್ತಿವೆ ಎಂದರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ದಶಕಗಳಿಂದ ವರ್ಕ್​ ಆರ್ಡರ್ ಇಲ್ಲದೆ ಕಾಮಗಾರಿಗಳು ನಡೆಯುತ್ತಿವೆ ಎಂದರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Apr 13, 2022 | 7:47 PM

Share

ಸಂತೋಷ ಅವರು ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಪರ್ಸೆಂಟೇಜ್ ಕುರಿತ ಆರೋಪದಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ, ಎಲ್ಲಾ ಇಲಾಖೆಗಳ ಸಚಿವರು ಲಂಚ ತೆಗೆದುಕೊಳ್ಳದೆ ಕೆಲಸ ಮಾಡುವುದಿಲ್ಲ. ಸಚಿವರುಗಳ ಲಂಚಗುಳಿತನಕ್ಕೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದು ಕೆಂಪಣ್ಣ ಹೇಳಿದರು.

ರಾಜ್ಯ ಗುತ್ತಿಗೆದಾರರ ಸಂಘ (state contractors’ association) ಕೆರಳಿದೆ. ಸಂತೋಷ ಪಾಟೀಲ (Santosh Patil) ಅವರು ಮಂಗಳವಾರ ಉಡುಪಿಯಲ್ಲಿ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿದ್ದು ಅವರ ಪಿತ್ತ ಕೆರಳಿಸಿದೆ. ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸರ್ಕಾರ ಮಟ್ಟದಲ್ಲಿ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ಹಾಸು ಹೊಕ್ಕಿದೆ ಅನ್ನೋದನ್ನು ವಿವರಿಸಿದರು. ಸಂತೋಷ ಅವರು ವರ್ಕ್​ ಆರ್ಡರ್​ (work order) ಇಲ್ಲದೆ ಕೆಲಸ ಮಾಡಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಕೆಂಪಣ್ಣ ಅವರು ದಶಕಗಳಿಂದ ಅದು ನಡೀತಾ ಬರುತ್ತಿದೆ, ತುರ್ತು ಸಂದರ್ಭಗಳಲ್ಲಿ ವರ್ಕ್​ ಆರ್ಡರ್ ಇಲ್ಲದೆ ಕೆಲಸ ಮಾಡಿಸಿ, ನಂತರ ಅದನ್ನು ಅಪ್ರೂವ್ ಮಾಡಲಾಗುತ್ತದೆ ಎಂದರು. ಸಂತೋಷ ತನಗಾಗಿರುವ ಅನ್ಯಾಯದ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದನೆಂದರೆ ಅವನೆಷ್ಟು ನೊಂದುಕೊಂಡಿದ್ದ ಅನ್ನೋದನ್ನು ಎಲ್ಲರೂ ಯೋಚಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಸಂತೋಷ ಅವರಿಗೆ ಸಹಾಯ ಮಡುವ ಪ್ರಯತ್ನ ಮಾಡಲು ಸಂಘ ಪ್ರಯತ್ನಿಸಿತ್ತು ಆದರೆ, ಪ್ರಧಾನಿಗಳಿಗೆ ಪತ್ರ ಬರೆದ ಮೇಲೆ ಅವರಿಗೆ ಬೆದರಿಕೆ ಕರೆಗಳು ಜಾಸ್ತಿ ಬರುತ್ತಿದ್ದವು. ಹಾಗಾಗಿ ಅವರು ಒಂದು ಸ್ಥಳದಲ್ಲಿರುತ್ತಿರಲಿಲ್ಲ. ಈಶ್ವರಪ್ಪನವರು ಸಂತೋಷ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಬಳಿಕ ಕಾನೂನಿನ ನೆರವು ಒದಗಿಸಲಾಗುವುದು ಎಂದು ಹೇಳಿದ್ದೆವು. ಆದರೆ ಅವರು ಮತ್ತೆ ನಮ್ಮನ್ನು ಸಂಪರ್ಕಿಸಲಿಲ್ಲ ಮತ್ತು ನಮ್ಮ ಕರೆಗಳಿಗೆ ಆವರು ಉತ್ತರಿಸಲಿಲ್ಲ, ಎರಡು ದಿನಗಳ ಬಳಿಕ ಅವರ ಸಾವಿನ ಘಟನೆ ನಡೆದಿದೆ ಎಂದು ಕೆಂಪಣ್ಣ ಹೇಳಿದರು.

ಸಂತೋಷ ಅವರು ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಪರ್ಸೆಂಟೇಜ್ ಕುರಿತ ಆರೋಪದಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ, ಎಲ್ಲಾ ಇಲಾಖೆಗಳ ಸಚಿವರು ಲಂಚ ತೆಗೆದುಕೊಳ್ಳದೆ ಕೆಲಸ ಮಾಡುವುದಿಲ್ಲ. ಸಚಿವರುಗಳ ಲಂಚಗುಳಿತನಕ್ಕೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಅದರೆ ಸಂತೋಷ್ ಗೆ ಆದ ಗತಿ ನಮಗೂ ಆದೀತು ಎಂಬ ಭಯಕ್ಕೆ ಸುಮ್ಮನಿದ್ದೆವು. ಅದರೆ ಇನ್ನು ನಾವು ಸುಮ್ಮನಿರಲ್ಲ. ಬ್ರಷ್ಟಾಚಾರ ಖಂಡಿಸಿ ನಾವೆಲ್ಲ ಒಂದು ತಿಂಗಳವರೆಗೆ ಕೆಲಸ ನಿಲ್ಲಿಸುತ್ತೇವೆ ಎಂದು ಕೆಂಪಣ್ಣ ಹೇಳಿದರು.​

ಇದನ್ನೂ ಓದಿ:    ‘ಬೀಸ್ಟ್​’ ಚೆನ್ನಾಗಿಲ್ಲ ಎಂಬ ಹತಾಶೆಯಿಂದ​ ಥಿಯೇಟರ್​ ಪರದೆಗೆ ಬೆಂಕಿ ಹಚ್ಚಿದ ವಿಜಯ್​ ಫ್ಯಾನ್ಸ್​? ವಿಡಿಯೋ ವೈರಲ್​