AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಬಿಡುಗಡೆಯಾಗುತ್ತಿರುವ ‘ಕೆಜಿಎಫ್-2’ ಚಿತ್ರದ ಯಶಸ್ಸಿಗೆ ಬಳ್ಳಾರಿಯಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

ನಾಳೆ ಬಿಡುಗಡೆಯಾಗುತ್ತಿರುವ ‘ಕೆಜಿಎಫ್-2’ ಚಿತ್ರದ ಯಶಸ್ಸಿಗೆ ಬಳ್ಳಾರಿಯಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

TV9 Web
| Edited By: |

Updated on: Apr 13, 2022 | 5:13 PM

Share

ಯಶ್ ಅವರು ಕನ್ನಡದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು ಹಾಗಾಗಿ ಅವರ ಅಭಿಮಾನಿಗಳ ಸಂಖ್ಯೆ ಸಹ ಬಹಳ ದೊಡ್ಡದು. ನೆಚ್ಚಿನ ನಟನ ಚಿತ್ರ ಬಿಡುಗಡೆಯಾಗುವಾಗ ಅಭಿಮಾನಿಗಳು ಅದರ ಯಶಸ್ಸಿಗಾಗಿ ಪೂಜೆ, ಹೋಮ, ಹವನಗಳನ್ನು ನಡೆಸುತ್ತಾರೆ.

ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಅಭಿನಯದ ಮತ್ತು ಪ್ರಶಾಂತ್ ನೀಲ್ (Prashant Neil) ನಿರ್ದೇಶನದ ಬಹು ನಿರೀಕ್ಷಿತ ‘ಕೆಜಿಎಫ್-2’ ನಾಳೆ ಅಂದರೆ ಗುರುವಾರ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ‘ಕೆಜಿಎಫ್-1’ ಚಿತ್ರ ಕಂಡ ಪ್ರಚಂಡ ಯಶಸ್ಸಿನ ಹಿನ್ನೆಲೆಯಲ್ಲಿ ‘ಕೆಜಿಎಫ್-2’ ಸಹಜವಾಗೇ ಭಾರಿ ಭರವಸೆ ಮೂಡಿಸಿದೆ. ಹಾಗೆ ನೋಡಿದರೆ ಈ ಚಿತ್ರ ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್-19 ಮಹಾಮಾರಿಯಿಂದಾಗಿ ಚಿತ್ರದ ಶೂಟಿಂಗ್ ವಿಳಂಬಗೊಳ್ಳುತ್ತಾ ಹೋಗಿತ್ತು. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ ಮತ್ತು ಗುರುವಾರ ‘ಕೆಜಿಎಫ್-2’ ಬೆಳ್ಳಿತೆರೆಗಳ ಮೇಲೆ ಅಪ್ಪಳಿಸಲಿದೆ. ಯಶ್ ಅವರು ಕನ್ನಡದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು ಹಾಗಾಗಿ ಅವರ ಅಭಿಮಾನಿಗಳ ಸಂಖ್ಯೆ ಸಹ ಬಹಳ ದೊಡ್ಡದು. ನೆಚ್ಚಿನ ನಟನ ಚಿತ್ರ ಬಿಡುಗಡೆಯಾಗುವಾಗ ಅಭಿಮಾನಿಗಳು ಅದರ ಯಶಸ್ಸಿಗಾಗಿ ಪೂಜೆ, ಹೋಮ, ಹವನಗಳನ್ನು ನಡೆಸುತ್ತಾರೆ.

ನಮಗೆ ಬಳ್ಳಾರಿಯಿಂದ ಈ ವಿಡಿಯೋ ಸಿಕ್ಕಿದೆ. ಇದರಲ್ಲಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ‘ಕೆಜಿಎಫ್-2’ ಚಿತ್ರ ಪ್ರಚಂಡ ಯಶ ಗಳಿಸಿ ಬಾಕ್ಸಾಫೀಸಿನ ಎಲ್ಲ ದಾಖಲೆಗಳನ್ನು ಹಿಂದಟ್ಟಲಿ ಅಂತ ದುರ್ಗಾಮಾತೆಯನ್ನು ಬೇಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಮೂರ್ತಿ ಪಕ್ಕ ಯಶ್ ಅವರ ಫೋಟೋವನ್ನಿಟ್ಟು ಪೂಜೆ ಸಲ್ಲಿಸಲಾಯಿತು.

ಪೂಜೆಯನ್ನು ಆಯೋಜಿಸಿದ ಭರತ ಹೆಸರಿನ ಅಭಿಮಾನಿ ಮಾಧ್ಯಮದವರ ಜೊತೆ ಮಾತಾಡಿ ತಾವೆಲ್ಲ ಯಶ್ ಅಣ್ಣ ಅವರನ್ನು ಬಾಸ್ ಅಂತಲೇ ಕರೆಯೋದು, ಅವರ ಈ ಚಿತ್ರ ‘ಕೆಜಿಎಫ್-2’ ಭಾರಿ ಯಶ ಗಳಿಸಲಿ, ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿಸಲಿ ಎಂದು ದುರ್ಗಾ ಮಾತೆಯನ್ನು ಕೇಳಿಕೊಂಡೆವು ಅಂತ ಹೇಳಿದರು.

ಇದನ್ನೂ ಓದಿ:   ಅಭಿಮಾನಿಗಳು ನಟರನ್ನು ಅನುಕರಿಸುತ್ತಾರೆ..ಇಂಥ ದೃಶ್ಯಗಳನ್ನು ತೋರಿಸಬಾರದು: ಕೆಜಿಎಫ್-2​ ಟೀಸರ್​ ಬಗ್ಗೆ ಸುಧಾಕರ್​ ಪ್ರತಿಕ್ರಿಯೆ