AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳು ನಟರನ್ನು ಅನುಕರಿಸುತ್ತಾರೆ..ಇಂಥ ದೃಶ್ಯಗಳನ್ನು ತೋರಿಸಬಾರದು: ಕೆಜಿಎಫ್-2​ ಟೀಸರ್​ ಬಗ್ಗೆ ಸುಧಾಕರ್​ ಪ್ರತಿಕ್ರಿಯೆ

ಇಂದು ರಾಜ್ಯಕ್ಕೆ 20 ಸಾವಿರ ಡೋಸ್ ಕೊವ್ಯಾಕ್ಸಿನ್​ ಲಸಿಕೆ ಬರುತ್ತಿದೆ. ನಾಳೆಯೊಳಗೆ ಎಲ್ಲ ಜಿಲ್ಲೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗುವುದು. ಕೊವ್ಯಾಕ್ಸಿನ್​, ಕೊವಿಶೀಲ್ಡ್​ ಎರಡೂ ವ್ಯಾಕ್ಸಿನ್​ ಕೊಡುತ್ತೇವೆ. ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ಕೊಡಬೇಕು ಎಂಬುದನ್ನು ಕೇಂದ್ರ ಸರ್ಕಾರ ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದೆ.

ಅಭಿಮಾನಿಗಳು ನಟರನ್ನು ಅನುಕರಿಸುತ್ತಾರೆ..ಇಂಥ ದೃಶ್ಯಗಳನ್ನು ತೋರಿಸಬಾರದು: ಕೆಜಿಎಫ್-2​ ಟೀಸರ್​ ಬಗ್ಗೆ ಸುಧಾಕರ್​ ಪ್ರತಿಕ್ರಿಯೆ
ಡಾ. ಕೆ.ಸುಧಾಕರ್​
Lakshmi Hegde
|

Updated on:Jan 13, 2021 | 12:51 PM

Share

ಬೆಂಗಳೂರು: ಕೆಜಿಎಫ್​ ಚಿತ್ರದಲ್ಲಿ ಬಂದೂಕಿನಿಂದ ಯಶ್​ ಸಿಗರೇಟ್​ ಹಚ್ಚಿರುವ ದೃಶ್ಯ ಭರ್ಜರಿ ಫೇಮಸ್ ಆದ ಬೆನ್ನಲ್ಲೇ, ಈ ದೃಶ್ಯವನ್ನು ತೆಗೆಯಿರಿ ಎಂದು ಆರೋಗ್ಯ ಇಲಾಖೆಯಿಂದ ನೋಟಿಸ್ ಕೂಡ ಬಂದಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ನಟರನ್ನು ಸಾವಿರಾರು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಹಾಗಾಗಿ ಯಶ್​ ಸೇರಿ ಇತರ ನಟರಿಗೂ ಆರೋಗ್ಯ ಇಲಾಖೆಯಿಂದ ಮನವಿ ಮಾಡುತ್ತಿದ್ದೇವೆ. ಇಂಥ ದೃಶ್ಯಗಳನ್ನು ತೋರಿಸಬಾರದು ಎಂದಿದ್ದಾರೆ.

ದೇಶದಲ್ಲಿ ಕ್ಯಾನ್ಸರ್ ಪೀಡಿತರು ಹೆಚ್ಚುತ್ತಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ಆದಷ್ಟು ಸಿಗರೇಟ್​ ಸೇದುವ ದೃಶ್ಯಗಳನ್ನು ತೋರಿಸಬಾರದು. ಜನರು ನಟನನ್ನು ಅನುಕರಿಸುತ್ತಾರೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಹ ದೃಶ್ಯಗಳು ಇರಬೇಕು ಹೊರತು, ಇಂಥದ್ದನ್ನೆಲ್ಲ ತೋರಿಸಬಾರದು ಎಂದು ಹೇಳಿದ್ದಾರೆ.

ಮುನಿರತ್ನ ಸಚಿವರಾಗ್ತಾರೆ ! ಈ ಬಾರಿಯ ಸಚಿವ ಸಂಪುಟದಲ್ಲೂ ಮುನಿರತ್ನ ಹೆಸರು ಇಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್​, ಮುನಿರತ್ನ ಹೆಸರು ಪಟ್ಟಿಯಲ್ಲಿ ಇಲ್ಲ ಎಂಬ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ ಮೇಲೆಯೇ ಗೊತ್ತಾಗಿದ್ದು. ಆದರೆ ಖಂಡಿತ ಮುನಿರತ್ನ ಈ ಬಾರಿ ಸಚಿವರಾಗ್ತಾರೆ ಎನ್ನುವ ನಂಬಿಕೆ ಇದೆ. ಸಂಪುಟ ವಿಸ್ತರಣೆ ಎಂದಮೇಲೆ ಗೊಂದಲ ಇದ್ದೇ ಇರುತ್ತದೆ. ಅದು ನಿವಾರಣೆಯಾಗುವವರೆಗೂ ಕಾಯಬೇಕು. ನಾವು 17 ಜನರಷ್ಟೇ ಅಲ್ಲ, ಬಿಜೆಪಿಯ ಎಲ್ಲ ಶಾಸಕರೂ ಒಟ್ಟಿಗೇ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ನಾಳೆಯೊಳಗೆ ಕೊವಿಡ್​ ಲಸಿಕೆ ಇಂದು ರಾಜ್ಯಕ್ಕೆ 20 ಸಾವಿರ ಡೋಸ್ ಕೊವ್ಯಾಕ್ಸಿನ್​ ಲಸಿಕೆ ಬರುತ್ತಿದೆ. ನಾಳೆಯೊಳಗೆ ಎಲ್ಲ ಜಿಲ್ಲೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗುವುದು. ಕೊವ್ಯಾಕ್ಸಿನ್​, ಕೊವಿಶೀಲ್ಡ್​ ಎರಡೂ ವ್ಯಾಕ್ಸಿನ್​ ಕೊಡುತ್ತೇವೆ. ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ಕೊಡಬೇಕು ಎಂಬುದನ್ನು ಕೇಂದ್ರ ಸರ್ಕಾರ ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಲಸಿಕೆ ಹಂಚಿಕೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಬಂದೂಕಿನಿಂದ ಸಿಗರೇಟ್ ಹಚ್ಚಿದಕ್ಕೆ ರಾಕಿಂಗ್ ಸ್ಟಾರ್ ಯಶ್​ಗೆ ನೋಟಿಸ್.. ಸೀನ್ ಕತ್ತರಿಸುವಂತೆ ಸೂಚನೆ

ಪಂಚಮಸಾಲಿ ಸ್ವಾಮೀಜಿ ಗುಡುಗು: ಒಂದು ವರ್ಷದ ನಂತರ ನಿರಾಣಿಗೆ ಸಚಿವ ಸ್ಥಾನದ ಗದ್ದುಗೆ

Published On - 12:39 pm, Wed, 13 January 21

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ