ರೆಸ್ಯೂಮ್ನಲ್ಲಿ ಕನ್ನಡ ಇದ್ರೆ IT ಕಂಪನಿ ರಿಜೆಕ್ಟ್ ಮಾಡ್ತಿವೆ: ಅಳಲು ತೋಡಿಕೊಂಡ ಯುವತಿ; ವಿಡಿಯೋ ವೈರಲ್
ಮುಖ್ಯಾಂಶಗಳು
- ರೆಸ್ಯೂಮ್ನಲ್ಲಿ ಕನ್ನಡ ಇದ್ರೆ IT ಕಂಪನಿ ರಿಜೆಕ್ಟ್ ಮಾಡ್ತಿವೆ
- ರೆಸ್ಯೂಮ್ನಲ್ಲಿ ತೆಲುಗು & ತಮಿಳಿಗರಿಗೆ ಹೆಚ್ಚಿನ ಮಾನ್ಯತೆ
- ವಿಡಿಯೋ ಮಾಡಿ ಅಳಲು ತೋಡಿಕೊಂಡ ಯುವತಿ
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಮಾತೃಭಾಷೆ ಕನ್ನಡವೆಂದು ನಮೂದಿಸಿದವರಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ ಎಂಬ ಯುವತಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವರು ಧ್ವನಿ ಎತ್ತಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 24: ‘ಐಟಿ ಕಂಪನಿಗಳು ತೆಲುಗು ಮತ್ತು ತಮಿಳಿಗರಿಗೆ ಹೆಚ್ಚಿನ ಮಾನ್ಯತೆ ನೀಡುತ್ತಿದ್ದು, ರೆಸ್ಯೂಮ್ನಲ್ಲಿ ಕನ್ನಡ ಇದ್ದರೆ ರಿಜೆಕ್ಟ್ ಮಾಡುತ್ತಿವೆ’ ಎಂದು ಓರ್ವ ಯುವತಿ ಅಳಲು ತೋಡಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ‘ಬೆಂಗಳೂರಿನ ಕಾಲೇಜುಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂವ್ ಕಂಡಕ್ಟ್ ಮಾಡುತ್ತಿಲ್ಲ. ರೆಸ್ಯೂಮ್ನಲ್ಲಿ ಕನ್ನಡ ಇದ್ದರೆ ಕೆಲಸಕ್ಕೆ ತೆಗೆದುಕೊಳ್ಳಲ್ಲ. ಕಡಿಮೆ ಸಂಬಳಕ್ಕೆ ಬೇರೆ ಕಡೆಯಿಂದ ಕರೆತರ್ತಾರೆ. ಇದರಿಂದ ನಮಗೆ ಅವಕಾಶಗಳು ಸಿಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರಕೊಡಿ’ ಎಂದು ಸಿಎಂ ಡಿಕೆ ಶಿವಕುಮಾರ್ಗೆ ಯುವತಿ ಮನವಿ ಮಾಡಿದ್ದಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

