ಮೆಟ್ರೋ ಕಾಮಗಾರಿ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ: ರಸ್ತೆಗೆ ಹರಿದ ಕೊಳಚೆ ನೀರು
ಬೊಮ್ಮನಹಳ್ಳಿ ವೃತ್ತದ ಸರ್ವೀಸ್ ರಸ್ತೆಯ ಬಿಬಿಎಂಪಿ ಕಚೇರಿ ಸಮೀಪವೇ ಅವ್ಯವಸ್ಥೆ ಕಂಡುಬಂದಿದೆ. ಡ್ರೈನೇಜ್ ಕೊಳಚೆ ನೀರು ರಸ್ತೆಯಲ್ಲಿ ಹರಿದಿದ್ದರಿಂದ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಸಮಸ್ಯೆ ಎದುರಿಸಿದ್ದಾರೆ. ಮೆಟ್ರೋ ಕಾಮಗಾರಿ ಮಾಡುವ ಸಂದರ್ಭದಲ್ಲಿ ಚರಂಡಿ ಮುಚ್ಚಿ ಹೋಗಿದ್ದು, ಬೊಮ್ಮನಹಳ್ಳಿ ವೃತ್ತ ಮಾರ್ಗವಾಗಿ ಹೋಗಬೇಕಿದ್ದ ಕೊಳಚೆ ನೀರು ರಸ್ತೆಯಲ್ಲಿ ಹರಿದಿದೆ.
ಬೊಮ್ಮನಹಳ್ಳಿ, ಡಿಸೆಂಬರ್ 03: ಮೆಟ್ರೋ ಕಾಮಗಾರಿ ಹಾಗೂ ಬಿಬಿಎಂಪಿ ಅಧಿಕಾರಿ ನಿರ್ಲಕ್ಷ್ಯದಿಂದ ಡ್ರೈನೇಜ್ ಕೊಳಚೆ ನೀರು ಉಕ್ಕಿ ರಸ್ತೆಯಲ್ಲಿ ಹರಿದಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರ ಪರದಾಡಿರುವಂತಹ ಘಟನೆ ಬೊಮ್ಮನಹಳ್ಳಿ (Bommanahalli) ವೃತ್ತದ ಸರ್ವೀಸ್ ರಸ್ತೆಯ ಬಿಬಿಎಂಪಿ ಕಚೇರಿ ಸಮೀಪವೇ ಅವ್ಯವಸ್ಥೆ ಕಂಡುಬಂದಿದೆ. ಡ್ರೈನೇಜ್ ಕೊಳಚೆ ನೀರು ರಸ್ತೆಯಲ್ಲಿ ಹರಿದಿದ್ದರಿಂದ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಸಮಸ್ಯೆ ಎದುರಿಸಿದ್ದಾರೆ. ಮೆಟ್ರೋ ಕಾಮಗಾರಿ ಮಾಡುವ ಸಂದರ್ಭದಲ್ಲಿ ಚರಂಡಿ ಮುಚ್ಚಿ ಹೋಗಿದೆ. ಬೊಮ್ಮನಹಳ್ಳಿ ವೃತ್ತ ಮಾರ್ಗವಾಗಿ ಹೋಗಬೇಕಿದ್ದ ಕೊಳಚೆ ನೀರು, ಚರಂಡಿ ಮುಚ್ಚಿರುವುದರಿಂದ ರಸ್ತೆಯಲ್ಲಿ ಹರಿದಿತ್ತು. ಮುಖ್ಯ ರಸ್ತೆಯಲ್ಲೇ ಅವಾಂತರ ಆಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದರು. ಮೆಟ್ರೋ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.