Bangladesh Crisis: ಬಾಂಗ್ಲಾದಲ್ಲಿ ಶೇಖ್ ಮುಜಿಬುರ್ ರೆಹಮಾನ್ ಪ್ರತಿಮೆಯ ತಲೆ ಮೇಲೆ ಮೂತ್ರ ಮಾಡಿದ ಜನ; ವಿಕೃತ ವಿಡಿಯೋ ವೈರಲ್

|

Updated on: Aug 06, 2024 | 6:48 PM

ಬಾಂಗ್ಲಾದೇಶದ ಸಂಸ್ಥಾಪಕ ಹಾಗೂ ಪಿತಾಮಹನೆಂದು ಪರಿಗಣಿಸಲ್ಪಡುವ, ಬಾಂಗ್ಲಾದೇಶಿಯರಿಂದ 'ಬಂಗಬಂಧು' ಎಂಬ ಬಿರುದು ಪಡೆದಿರುವ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯ ಮೇಲೆ ಹತ್ತಿದ ಪ್ರತಿಭಟನಾಕಾರರು ಆ ಪ್ರತಿಮೆಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ಪರಾರಿಯಾಗುತ್ತಿದ್ದಂತೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವ ಬದಲು ಪ್ರತಿಭಟನಾಕಾರರ ಹಿಂಸಾಚಾರ, ಸಂಭ್ರಮಾಚರಣೆ ಮಿತಿ ಮೀರಿದೆ. ಸೋಮವಾರ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿದ್ದ ಎಲ್ಲವನ್ನೂ ಲೂಟಿ ಮಾಡಿದ್ದಾರೆ. ಇಂದು ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಮತ್ತು ಅದರ ಸ್ಥಾಪಕ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯ ಮೇಲೆ ಪ್ರತಿಭಟನಾಕಾರರು ಮೂತ್ರ ವಿಸರ್ಜಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 06, 2024 06:47 PM