ಸಿಎಂ ಮೈಸೂರು ಸಿಟಿ ರೌಂಡ್ಸ್​, ಜೊತೆಗೆ ತಮ್ಮ ಹೊಸ ಮನೆ ವೀಕ್ಷಿಸಿದ ಸಿದ್ದರಾಮಯ್ಯ

ಸಿಎಂ ಮೈಸೂರು ಸಿಟಿ ರೌಂಡ್ಸ್​, ಜೊತೆಗೆ ತಮ್ಮ ಹೊಸ ಮನೆ ವೀಕ್ಷಿಸಿದ ಸಿದ್ದರಾಮಯ್ಯ

ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on: Aug 06, 2024 | 9:14 PM

ಮೈಸೂರು, (ಆಗಸ್ಟ್.06): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ (MUDA Scam) ಸಿಲುಕಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಆಗಸ್ಟ್ 06) ಫುಲ್ ಕೂಲ್ ನಲ್ಲಿದ್ದಾರೆ. ಹೌದು... ಪೊಲೀಸ್ ಎಸ್ಕಾರ್ಟ್‌ ಬಿಟ್ಟು ಒಬ್ಬಂಟಿಯಾಗಿ ಮೈಸೂರಿನಲ್ಲಿ ರೌಂಡ್ಸ್​ ಹಾಕಿದ್ದಾರೆ.

ಮೈಸೂರು, (ಆಗಸ್ಟ್​ 06): ರಾಜಕೀಯ ವಲಯದಲ್ಲಿ ಆಗಿರುವ ಬೆಳವಣಿಗೆಗಳಿಗೆ ತುಸು ಆತಂಕದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತವರು ಕ್ಷೇತ್ರ ಮೈಸುರಿಗೆ ತೆರಳಿದ್ದಾರೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆ ವೇಳೆಯಲ್ಲಿ ಮೈಸೂರು ನಗರದಲ್ಲಿ ಪೊಲೀಸ್ ಎಸ್ಕಾರ್ಟ್ ಬಿಟ್ಟು ಒಬ್ಬಂಟಿಯಾಗಿ ಸುತ್ತಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಕಾರಿಗೆ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಅವರು ಚಾಲಕರಾಗಿ ಸಾಥ್ ನೀಡಿದ್ದಾರೆ. ಮಾಜಿ ಶಾಸಕರು ಹಾಗೂ ತಮ್ಮ ಜೊತೆಗಾರರೊಂದಿಗೆ ಮೈಸೂರು ಸುತ್ತಾಡಿರುವ ಸಿಎಂ ಸಿದ್ದರಾಮಯ್ಯ ಅವರು ಒಂದು ಕಡೆ ಕಾರನ್ನು ನಿಲ್ಲಿಸಿ ಸಾರ್ವಜನಿಕರ ಸ್ಥಳದಲ್ಲಿಯೇ ಕಾಫಿ ಸೇವನೆ ಮಾಡಿದ್ದಾರೆ. ಆಗ ಮೈಸೂರಿನ ಜನತೆಯ ಮುಂದೆ ನಗು ನಗುತ್ತಾ ಮಾತನಾಡಿದ್ದಾರೆ. ಇದಾದ ನಂತರ ಸಿದ್ದರಾಮಯ್ಯ ತಾವು ನೂತನವಾಗಿ ಕಟ್ಟಿಸುತ್ತಿರುವ ಹೊಸ ಮನೆಯ ಕಾಮಾಗಾರಿ ವೀಕ್ಷಿಸಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಎಸ್ಕಾರ್ಟ್ ಬಿಟ್ಟು ಎಲ್ಲೆಂದರಲ್ಲಿ ಸಂಚಾರ ಮಾಡುವುದನ್ನು ನೋಡಿದ ಮೈಸೂರು ಪೊಲೀಸರು ಗಾಬರಿಯಾಗಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಎಲ್ಲಿಗೆ ಹೋಗಿದ್ದಾರೆ, ಮುಂದೆ ಎಲ್ಲಿಗೆ ಹೋಗಲಿದ್ದಾರೆ ಎಂಬ ಮಾಹಿತಿ ಕಲೆ ಹಾಕುವುದಕ್ಕೆ ಪರದಾಡಿದರು.