AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 813 ಪಂದ್ಯಗಳ ಬಳಿಕ ಸೂಪರ್ ಓವರ್ ಆಡಿದ ಬಾಂಗ್ಲಾದೇಶ್

ಬರೋಬ್ಬರಿ 813 ಪಂದ್ಯಗಳ ಬಳಿಕ ಸೂಪರ್ ಓವರ್ ಆಡಿದ ಬಾಂಗ್ಲಾದೇಶ್

ಝಾಹಿರ್ ಯೂಸುಫ್
|

Updated on: Oct 22, 2025 | 8:31 AM

Share

Bangladesh vs West Indies, 2nd ODI: ಈ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಗಿತ್ತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 10 ರನ್​ಗಳಿಸಿದ್ದರು. 6 ಎಸೆತಗಳಲ್ಲಿ 11 ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡ 9 ರನ್​ಗಳಿಸಲಷ್ಟೇ ಶಕ್ತರಾದರು.

ಬಾಂಗ್ಲಾದೇಶ್ ತಂಡವು ಈವರೆಗೆ 813 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಏಕದಿನ ಕ್ರಿಕೆಟ್​ನಲ್ಲಿ453 ಮ್ಯಾಚ್​ಗಳನ್ನು ಆಡಿದ್ದರೆ, ಟೆಸ್ಟ್​ನಲ್ಲಿ 154 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಇನ್ನು 206 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದೇ ಒಂದು ಪಂದ್ಯವನ್ನು ಟೈ ಮಾಡಿಕೊಂಡಿರಲಿಲ್ಲ ಎಂಬುದು ವಿಶೇಷ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 813 ಮ್ಯಾಚ್​ಗಳನ್ನಾಡಿದರೂ ಬಾಂಗ್ಲಾದೇಶ್ ತಂಡವು ಸೂಪರ್ ಓವರ್ ಆಡಿಯೇ ಇರಲಿಲ್ಲ. ಆದರೀಗ ಈ ದೀರ್ಘಾವಧಿಯ ಕಾಯುವಿಕೆಗೆ ಅಂತ್ಯವಾಗಿದೆ.

ಢಾಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವು ಟೈನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್​ ಕಲೆಹಾಕಿದ್ದರು.

218 ರನ್​ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 213 ರನ್​ ಗಳಿಸಿದೆ. ಪರಿಣಾಮ ಮ್ಯಾಚ್ ಟೈನಲ್ಲಿ ಅಂತ್ಯಗೊಂಡಿದೆ.

ಇನ್ನು ಈ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಗಿತ್ತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 10 ರನ್​ಗಳಿಸಿದ್ದರು. 6 ಎಸೆತಗಳಲ್ಲಿ 11 ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡ 9 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡ 1 ರನ್​ನ ರೋಚಕ ಜಯ ಸಾಧಿಸಿದೆ. ಇತ್ತ ಚೊಚ್ಚಲ ಸೂಪರ್ ಓವರ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು ಕೇವಲ ಒಂದು ರನ್​ನಿಂದ ಸೋತು ನಿರಾಸೆ ಅನುಭವಿಸಿತು.