Shivamogga: ಒಳಮೀಸಲಾತಿ ಜಾರಿ ವಿರೋಧಿಸಿ ಬಂಜಾರಾ ಸಮುದಾಯದ ಉಗ್ರ ಪ್ರತಿಭಟನೆ, ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ!

|

Updated on: Mar 27, 2023 | 4:18 PM

ಸಮುದಾಯದ ಜನರಿಗೆ ಒಳಮೀಸಲಾತಿ ಬಗ್ಗೆ ಅಸಮಾಧಾನವಿದ್ದರೆ, ಒಂದೆಡೆ ಸೇರಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಲಿ. ಹೀಗೆ ಕಲ್ಲು ತೂರಾಟ ಮಾಡೋದು, ತಾಲ್ಲೂಕು ಕಚೇರಿ ಹತ್ತಿ ಧ್ವಜಗಳನ್ನು ಕಿತ್ತು ಬಿಸಾಡುವುದು ಖಂಡಿತ ಸರಿಯಲ್ಲ.

ಶಿವಮೊಗ್ಗ: ಜಿಲ್ಲೆಯ ಬಂಜಾರಾ ಸಮುದಾಯ (Banjara Community) ಒಳ ಮೀಸಲಾತಿ (internal reservation) ಜಾರಿ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರೆ. ಅದರೆ, ಅವರ ಪ್ರತಿಭಟನೆ ನಿಸ್ಸಂದೇಹವಾಗಿ ಎಲ್ಲೆ ಮೀರುತ್ತಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (BS Yediyurappa) ಶಿಕಾರಿಪುರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದು ಅಕ್ಷಮ್ಯ. ಯಡಿಯೂರಪ್ಪ ನಮ್ಮ ನಾಡಿನ ಹಿರಿಯ ನಾಯಕರು ಮತ್ತು 4 ಬಾರಿ ಮುಖ್ಯಮಂತ್ರಿಯಾಗಿದ್ದವರು. ಸಮುದಾಯದ ಜನರಿಗೆ ಒಳಮೀಸಲಾತಿ ಬಗ್ಗೆ ಅಸಮಾಧಾನವಿದ್ದರೆ, ಒಂದೆಡೆ ಸೇರಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಲಿ. ಹೀಗೆ ಕಲ್ಲು ತೂರಾಟ ಮಾಡೋದು, ತಾಲ್ಲೂಕು ಕಚೇರಿ ಹತ್ತಿ ಧ್ವಜಗಳನ್ನು ಕಿತ್ತು ಬಿಸಾಡುವುದು ಖಂಡಿತ ಸರಿಯಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 27, 2023 04:18 PM