ಪಂಚಮಸಾಲಿ ಮೀಸಲಾತಿ ರದ್ದು ಮಾಡುವ ಯೋಚನೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಬಸನಗೌಡ ಯತ್ನಾಳ್

ಪಂಚಮಸಾಲಿ ಮೀಸಲಾತಿ ರದ್ದು ಮಾಡುವ ಯೋಚನೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 27, 2023 | 2:30 PM

ಶಿವಕುಮಾರ್ ಅವರ ಪತ್ರಿಕಾ ಗೋಷ್ಟಿಯನ್ನು ವೀಕ್ಷಿಸಿರುವುದಾಗಿ ಹೇಳಿದ ಯತ್ನಾಳ್ ತಾಕತ್ತು ಮತ್ತು ದಮ್ಮಿದ್ರೆ ಅವರು ಮೀಸಲಾತಿ ರದ್ದು ಮಾಡಲಿ ಎಂದರು.

ವಿಜಯಪುರ: ಲಿಂಗಾಯತ ಪಂಚಮಸಾಲಿ (Panchamasali) ಮತ್ತು ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ನೀಡುವ ಮೊದಲು ಆ ಸಮುದಾಯಗಳ ಮಠಾಧೀಶರ ಮೇಲೆ ಒತ್ತಡ ಹಾಕಲಾಗಿದೆ ಎಂದು ಡಿಕೆ ಶಿವಕುಮಾರ್ (DK Shivakumar) ಮಾಡಿರುವ ಆರೋಪಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಟಿವಿ ಪ್ರತಿನಿಧಿಯೊಂದಿಗೆ ಮಾತಾಡಿದ ಯತ್ನಾಳ್ ಕೂಡಲಸಂಗಮದ ಶ್ರೀಗಳು ತಮ್ಮ ಮೇಲೆ ಸರ್ಕಾರ ಯಾವುದೇ ಒತ್ತಡ ಹೇರಿಲ್ಲ, ಅಂತ ಸ್ಪಷ್ಟನೆ ಈಗಾಗಲೇ ನೀಡಿದ್ದಾರೆ. ಶಿವಕುಮಾರ್ ಅವರ ಪತ್ರಿಕಾ ಗೋಷ್ಟಿಯನ್ನು ವೀಕ್ಷಿಸಿರುವುದಾಗಿ ಹೇಳಿದ ಯತ್ನಾಳ್ ತಾಕತ್ತು ಮತ್ತು ದಮ್ಮಿದ್ರೆ ಅವರು ಮೀಸಲಾತಿ ರದ್ದು ಮಾಡಲಿ ಎಂದರು. ಒಂದು ವೇಳೆ ಅವರೇನಾದರೂ ಅಂಥ ಪ್ರಯತ್ನಕ್ಕೆ ಕೈಹಾಕಿದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ವಿಜಯಪುರ ಶಾಸಕ ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 27, 2023 02:30 PM